ಭಾವೈಕ್ಯದಿಂದ ಹಬ್ಬಗಳನ್ನು ಆಚರಿಸಿ

xr:d:DAFrCSyoYmU:383,j:6403416982788121900,t:24040809
ಕಂಪ್ಲಿಯ ಪೊಲೀಸ್ ಠಾಣೆಯಲ್ಲಿ ಶನಿವಾರ ಶಾಂತಿಸಭೆ ನಡೆಯಿತು. ಪ್ರಮುಖರಾದ ಭಟ್ಟ ಪ್ರಸಾದ್, ಸಿ.ಅರ್.ಹನುಮಂತ, ಲಡ್ಡು ಹೊನ್ನೂರವಲಿ, ವೀರಾಂಜನೇಯಲು, ಸೈಯದ್ ಉಸ್ಮಾನ್, ವಿ.ವಿದ್ಯಾಧರ ಇತರರಿದ್ದರು.
Published on

ಕಂಪ್ಲಿ: ಯುಗಾದಿ ಹಾಗೂ ರಮಜಾನ್ ನಿಮಿತ್ತ ಸ್ಥಳೀಯ ಠಾಣೆಯಲ್ಲಿ ಶನಿವಾರ ಶಾಂತಿ ಸಭೆ ನಡೆಯಿತು.

ಪಿಐ ಪ್ರಕಾಶ ಮಾಳಿ ಮಾತನಾಡಿ, ಲೋಕಸಭಾ ಚುನಾವಣೆ ನೀತಿ ಸಂಹಿತೆಯಿದ್ದು, ನೀತಿ ಸಂಹಿತೆ ಉಲ್ಲಂಘಿಸದಂತೆ ಸರ್ವ ಧರ್ಮಿಯರೂ ಪರಸ್ಪರ ಭಾವೈಕ್ಯದಿಂದ, ಪರಧರ್ಮಸಹಿಷ್ಣುತೆಯಿಂದ ಯುಗಾದಿ, ರಮಜಾನ್ ಹಬ್ಬ ಆಚರಿಸಬೇಕು. ಎಲ್ಲರೂ ಸೇರಿ ಶಾಂತಿ, ಸಂತೋಷದಿಂದ ಹಬ್ಬಗಳನ್ನು ಆಚರಿಸಬೇಕು ಎಂದು ಹೇಳಿದರು.

ಪಿಎಸ್‌ಐ ಬಿ.ಎಸ್.ನಾಯ್ಡು, ಧರ್ಮಣ್ಣ, ಎಎಸ್‌ಐ ಬಸವರಾಜ, ಪ್ರಮುಖರಾದ ಭಟ್ಟ ಪ್ರಸಾದ್, ಸಿ.ಅರ್.ಹನುಮಂತ, ಲಡ್ಡು ಹೊನ್ನೂರವಲಿ, ವೀರಾಂಜನೇಯಲು, ಸೈಯದ್ ಉಸ್ಮಾನ್, ಕೊಟ್ಟೂರು ರಮೇಶ, ವಿ.ವಿದ್ಯಾಧರ, ಅಕ್ಕಿಜಿಲಾನ್, ಗಂಗಣ್ಣ, ಎ.ಕೆ.ಲೋಕೇಶ್, ಬಾವಿಕಟ್ಟೆ ಚನ್ನಬಸವ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net