

ಮದ್ದೂರು: ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಅಂಗವಾಗಿ ಪಟ್ಟಣದ ಆರಕ್ಷಕ ಠಾಣೆಯಲ್ಲಿ ಮಂಗಳವಾರ ಶಾಂತಿ ಸಭೆ ನಡೆಯಿತು.
ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪೊಲೀಸ್ ಇನ್ಸ್‌ಪೆಕ್ಟರ್ ಸಂತೋಷ್, ಗಣೇಶ ಚತುರ್ಥಿ ಮತ್ತು ಈದ್‌ಮಿಲಾದ್ ಹಬ್ಬವನ್ನು ಹಿಂದು-ಮುಸ್ಲಿಮರು ಶಾಂತಿ, ಸೌಹಾರ್ದಯತೆ ಆಚರಣೆ ಮಾಡಬೇಕು. ಸಾಮರಸ್ಯ ಹಾಗೂ ಪರಸ್ಪರ ಸಹಕಾರದಿಂದ 2 ಹಬ್ಬಗಳನ್ನು ಆಚರಿಸಬೇಕು ಎಂದು ಅವರು, ಹಬ್ಬಗಳನ್ನು ಮಾಡುವಾಗ ಅನುಸರಿಸಬೇಕಾದ ಸರ್ಕಾರದ ಸೂಚನೆಗಳನ್ನು ಸಭೆಯಲ್ಲಿದ್ದ ಮುಖಂಡರಿಗೆ ವಿವರಿಸಿದರು.
ಗಣೇಶನಮೂರ್ತಿ ಪ್ರತಿಷ್ಠಾಪನೆ ಮಾಡುವವರು ಕಡ್ಡಾಯವಾಗಿ ಪುರಸಭೆ, ಪೊಲೀಸ್ ಠಾಣೆ, ಸೆಸ್ಕ್ ಅನುಮತಿ ಪಡೆದುಕೊಳ್ಳಬೇಕು, ಸರ್ಕಾರದ ನಿಯಮಗಳನ್ನು ಪಾಲಿಸಬೇಕು ಎಂದರು.
ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಪಿಎಸ್‌ಐ ಸಿದ್ದರಾಜು, ಪುರಸಭಾ ಸದಸ್ಯ ಆದಿಲ್ ಆಲಿಖಾನ್, ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರಾದ ಸಂತೋಷ್, ವೆಂಕಟೇಶ್, ಇಂತಿಯಾಜ್ ವುಲ್ಲಾಖಾನ್, ಪೈರೋಜ್ ಇತರರಿದ್ದರು.