ಶ್ರದ್ಧಾ ಭಕ್ತಿಯಿಂದ ಈದುಲ್ ಫಿತ್ರ್ ಆಚರಣೆ

11-04-Shiva-1
ಈದುಲ್ ಫಿತ್ರ್ ಅಂಗವಾಗಿ ರಾಯಚೂರಿನ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಗುರುವಾರ ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು.
Published on

ರಾಯಚೂರು: ರಂಜಾನ್ ಅಂಗವಾಗಿ ಕಳೆದ ಒಂದು ತಿಂಗಳಿಂದ ಉಪವಾಸ ವ್ರತದಲ್ಲಿದ್ದ ಮುಸ್ಲಿಂ ಬಾಂಧವರು ಗುರುವಾರ ನಗರದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡಸುವ ಮೂಲಕ ಈದುಲ್ ಫಿತ್ರ್ ಹಬ್ಬವನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಿದರು.
ಹೊಸ ಬಟ್ಟೆ ತೊಟ್ಟು ಸಾಮೂಹಿಕ ಪ್ರಾರ್ಥನೆ ನಡೆಸಿದ ನಂತರದಲ್ಲಿ ಒಬ್ಬರಿಗೊಬ್ಬರು ಹಬ್ಬದ ಶುಭಾಷಯಗಳನ್ನು ವಿನಿಮಯ ಮಾಡಿಕೊಂಡರು. ಈದ್ಗಾ ಮೈದಾನದಲ್ಲಿ ಸ್ಥಳದ ಅಭಾವದಿಂದಾಗಿ ಜಿಲ್ಲಾ ನ್ಯಾಯಾಲಯದ ಮುಂಭಾಗದಲ್ಲಿ ಕುಳಿತು ಪ್ರಾರ್ಥನೆ ನಡೆಸಲಾಯಿತು.
ಒಂದು ತಿಂಗಳು ಉಪವಾಸ ವ್ರತದಲ್ಲಿದ್ದ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ನಂತರದಲ್ಲಿ ಮನೆಗಳಿಗೆ ತೆರಳಿ ಹಬ್ಬದ ವಿಶೇಷ ಭೋಜನವನ್ನು ಸವಿದರು. ಮಾಜಿ ಶಾಸಕ ಸೈಯದ್ ಯಾಸೀನ್, ವಿವಿಧ ಪಕ್ಷಗಳ ಮುಖಂಡರಾದ ರವಿ ಬೋಸರಾಜು, ಜಿ.ಕುಮಾರನಾಯಕ, ಮಹ್ಮದ್ ಶಾಲಂ, ರವಿ ಪಾಟೀಲ್, ಜಯಣ್ಣ, ಕೆ.ದೇವಣ್ಣ ನಾಯಕ, ಕೆ,.ಶಾಂತಪ್ಪ, ಜಿ.ಶಿವಮೂರ್ತಿ ಈದ್ಗಾ ಮೈದಾನಕ್ಕೆ ಆಗಮಿಸಿ ಮುಸ್ಲಿಂ ಬಾಂಧವರಿಗೆ ಹಬ್ಬದ ಶುಭಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net