ಸಡಗರ, ಸಂಭ್ರಮದಿಂದ ಕ್ರಿಸ್‌ಮಸ್ ಆಚರಣೆ

25-12-Shiva-3
ರಾಯಚೂರಿನ ಮೆಥೋಡಿಸ್ಟ್ ಚರ್ಚ್‌ನಲ್ಲಿ ಕ್ರಿಸ್‌ಮಸ್ ನಿಮಿತ್ತವಾಗಿ ಕ್ರೈಸ್ತ ಧರ್ಮಗುರು ಎ.ಸಿಮೋನ್ ಕೆಕ್ ಕತ್ತರಿಸಿ ಹಬ್ಬದ ಶುಭಾಷಯ ಹಂಚಿಕೊಂಡರು. ಶಾಸಕ ಡಾ.ಶಿವರಾಜ ಪಾಟೀಲ್, ನಗರಸಭೆ ಸದಸ್ಯರಾದ ಜಯಣ್ಣ, ಜಿಂದಪ್ಪ, ಮುಖಂಡರಾದ ರವಿ ಬೋಸರಾಜು, ಎ.ವಸಂತಕುಮಾರ, ಮಹ್ಮದ್ ಶಾಲಂ, ಕೆ.ದೇವಣ್ಣ ನಾಯಕ ಇದ್ದರು.
Published on

ರಾಯಚೂರು: ಜಿಲ್ಲೆಯಾದ್ಯಂತ ಕ್ರೈಸ್ತ ಸಮುದಾಯದ ಜನರು ಸೋಮವಾರ ಸಡಗರ, ಸಂಭ್ರಮದಿಂದ ಕ್ರಿಸ್‌ಮಸ್ ಹಬ್ಬವನ್ನು ಆಚರಿಸಲಾಯಿತು. ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಯೇಸುಕ್ರಿಸ್ತನಿಗೆ ನಮನ ಸಲ್ಲಿಸಲಾಯಿತು.
ನಗರದ ಮೆಥೋಡಿಸ್ಟ್, ಕ್ಯಾಥೋಲಿಕ್, ಆಗಪೆ ಚರ್ಚ್ ಸೇರಿದಂತೆ ವಿವಿಧ ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದರ ಜತೆಗೆ ಬೈಬಲ್ ಪಠಣ ನಡೆಸಲಾಯಿತು.
ನಗರ ಶಾಸಕ ಡಾ.ಶಿವರಾಜ ಪಾಟೀಲ್, ನಗರಸಭೆ ಸದಸ್ಯರಾದ ಜಯಣ್ಣ, ಜಿಂದಪ್ಪ, ಡಿ.ಲಕ್ಷ್ಮಿ, ಮುಖಂಡರಾದ ರವಿ ಬೋಸರಾಜು, ಎ.ವಸಂತಕುಮಾರ, ಮಹ್ಮದ್ ಶಾಲಂ, ಕೆ.ದೇವಣ್ಣ ನಾಯಕ ಸೇರಿದಂತೆ ಇತರರು ಮೆಥೋಡಿಸ್ಟ್ ಚರ್ಚ್‌ಗೆ ಭೇಟಿ ನೀಡಿ ಕೆಕ್ ಕತ್ತರಿಸಿ ಕ್ರಿಸ್‌ಮಸ್ ಹಬ್ಬದ ಶುಭಾಷಯಗಳನ್ನು ವಿನಿಮಯ ಮಾಡಿಕೊಂಡಿದರು. ಈ ಸಂದರ್ಭದಲ್ಲಿ ಕ್ರೈಸ್ತ ಧರ್ಮಗುರು ಎ.ಸಿಮೋನ್ ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net