ಬಳ್ಳಾರಿ ; ಈ ತಿಂಗಳ ಮಾ.30 ಯುಗಾದಿ ಹಾಗೂ ಏ.06 ರಂದು ಜರುಗುವ ರಾಮನವಮಿಯನ್ನು ಹಲಾಲ್ ಮುಕ್ತ ಹಬ್ಬವನ್ನಾಗಿ ಆಚರಿಸಬೇಕು ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕರೆ ನೀಡಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಈಗಾಗಲೇ ರಾಜ್ಯದ 29 ಕಡೆಗಳಲ್ಲಿ ಹಲಾಲ್ ಮುಕ್ತ ಮಾಂಸ ಮಾರಾಟ ಮಾಡಲಾಗುತ್ತಿದೆ. ಗೋ ಹಂತಕರು, ಕಳ್ಳರೊಂದಿಗೆ ವ್ಯಾಪಾರ ನಡೆಸದಂತೆ ಎಚ್ಚರವಹಿಸಲಾಗಿದೆ. ದೇಶದಲ್ಲಿ ಪಾಕ್ ಪ್ರೇಮಿಗಳಿದ್ದು ಅಂತವರು ವ್ಯಾಪಾರ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದು, ಅವರ ಬಳಿ ವ್ಯಾಪಾರ ಮಾಡಬಾರದು ಎಂದರು.
ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಶೇ.4%ರಷ್ಟು ಅಲ್ಪ ಸಂಖ್ಯಾತ ಗುತ್ತಿಗೆದಾರರಿಗೆ ಮೀಲಿಟ್ಟಿದ್ದು ಖಂಡನೀಯ. ಇದರ ಬಗ್ಗೆ ಶ್ರೀರಾಮ ಸೇನೆಯ ಸಂಘಟನೆಯಿಂದ ಹೈಕೋರ್ಟ್‌ನಲ್ಲಿ ಪಿಐಎಲ್ ಹಾಕಲಾಗುವುದು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಹತ್ಯೆಗೈದ ಆರೋಪಿಗಳಿಗೆ 41 ವರ್ಷಗಳ ಬಳಿಕ ನ್ಯಾಯಾಲಯ ತೀರ್ಪು ನೀಡಿತು. ಅಷ್ಟು ವರ್ಷ ವಿಳಂಬವಾಗವುದಕ್ಕೆ ನ್ಯಾಯಾಧೀಶರು ಏನು ನಿದ್ದೆ ಮಾಡುತ್ತಿದ್ದೇರೆ ಎಂದು ಪ್ರಶ್ನಿಸಿದರು.