ಶ್ರದ್ಧಾ-ಭಕ್ತಿಯಿಂದ ಬಕ್ರೀದ್ ಹಬ್ಬದಾಚರಣೆ

h17-Bakrid 1
Published on

ಹುಬ್ಬಳ್ಳಿ: ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಮುಸ್ಲಿಮರು ನಗರದಲ್ಲಿ ಸೋಮವಾರ ಶ್ರದ್ಧಾ -ಭಕ್ತಿಯಿಂದ ಆಚರಿಸಿದರು.
ಇಲ್ಲಿಯ ಚನ್ನಮ್ಮ ಮೈದಾನ(ಈದ್ಗಾ)ದಲ್ಲಿ ಸೇರಿದ ಮುಸ್ಲಿಮರು, ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಧಾರ್ಮಿಕ ಗುರು ಮೌಲಾನಾ ಜಹೀರುದ್ದೀನ್ ಖಾಜಿ ನೇತೃತ್ವದಲ್ಲಿ ವಿಶ್ವದೆಲ್ಲೆಡೆ ಸುಖ-ಶಾಂತಿ ನೆಲೆಸಲಿ. ಸಾಮರಸ್ಯ, ಸಹಬಾಳ್ವೆಯಿಂದ ಜೀವನ ನಡೆಯಲಿದೆ. ಮಳೆ-ಬೆಳೆ ಚೆನ್ನಾಗಿ ಬರಲಿ ಎಂದು ಪ್ರಾರ್ಥಿಸಲಾಯಿತು. ಪ್ರಾರ್ಥನೆ ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳಲಾಯಿತು. ಮೂರುಸಾವಿರ ಮಠಕ್ಕೆ ತೆರಳಿ ಶ್ರೀಗಳ ಗದ್ದುಗೆ ಹಾಗೂ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿಗಳ ದರ್ಶಾನಾಶೀರ್ವಾದ ಪಡೆಯಲಾಯಿತು.
ಅಂಜುಮನ್ ಸಂಸ್ಥೆ ಹುಬ್ಬಳ್ಳಿ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ಮಾಜಿ ಅಧ್ಯಕ್ಷ ಮಹ್ಮದ್ ಯುಸೂಫ್ ಸವಣೂರ, ಪ್ರಮುಖರಾದ ಅಲ್ತಾಫ್ ಹಳ್ಳೂರ, ಶಿರಾಜ್ ಅಹ್ಮದ್ ಕುಡಚಿವಾಲೆ, ಇಲಿಯಾಸ್ ಮನಿಯಾರ, ಆರೀಫ ಭದ್ರಾಪುರ, ಅನ್ವರ ಮುಧೋಳ, ಬಾಬಾಜಾನ್ ಮುಧೋಳ, ಶಾರುಖ್ ಮುಲ್ಲಾ, ವಾಕರಸಾ ಸಂಸ್ಥೆ ಮಾಜಿ ಅಧ್ಯಕ್ಷ ಸದಾನಂದ ಡಂಗನವರ ಸೇರಿದಂತೆ ಬಹಳಷ್ಟು ಜನರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net