

ಸುಂಟಿಕೊಪ್ಪ: ಪರಿಸರಕ್ಕೆ ಮಾರಕವಾಗುತ್ತಿರುವ ಪಟಾಕಿ ಸಿಡಿಸುವ ದೀಪಾವಳಿಯನ್ನು ತೊರೆದು ಮಕ್ಕಳು ಈಗಿನಿಂದಲೇ ಮಕ್ಕಳು ಪರಿಸರ ಸಂರಕ್ಷಿಸುವ ದೀಪಾವಳಿಯನ್ನು ಆಚರಿಸುವಂತೆ ಕ್ಲಸ್ಟರ್ ಅಧಿಕಾರಿ ಸೀಮಾ ಸಲಹೆ ನೀಡಿದರು.
ಇಲ್ಲಿನ ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಮಾರಂಭದಲ್ಲಿ ಸ್ಕೌಟ್ಸ್, ಗೈಡ್ಸ್, ಬುಲ್ ಬುಲ್, ಕಬ್ ಸೇವಾ ದಳಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ದೀಪಾವಳಿ ಹಬ್ಬದಲ್ಲಿ ಸಿಡಿಮದ್ದುಗಳನ್ನು ಸಿಡಿಸದೆ ಮಣ್ಣಿನ ಹಣತೆಗಳನ್ನು ಹಚ್ಚುವ ಮೂಲಕ ದೀಪಾವಳಿಯನ್ನು ಆಚರಿಸುವುದರಿಂದ ಪರಿಸರದಲ್ಲಿರುವ ಅಜೀವ ಸಂಕುಲಗಳ ರಕ್ಷಣೆಗೊಳ್ಳಲಿದೆ. ಪರಿಸರ ಕಲುಷಿತಗೊಳ್ಳುವುದನ್ನು ನಾವು ತಡೆಯಬಹುದಾಗಿದೆ. ಅದರಿಂದ ಮಕ್ಕಳು ಪಟಾಕಿ ಸಿಡಿಮದ್ದುಗಳನ್ನು ತ್ಯಜಿಸುವ ಮೂಲಕ ಪರಿಸರ ಸಂರಕ್ಷಿತ ದೀಪಾವಳಿಯನ್ನು ಆಚರಿಸುವಂತೆ ಕಿವಿಮಾತು ಹೇಳಿದರು.
ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಜೋವಿಟಾ ವಾಸ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ಕೌಟ್ಸ್, ಗೈಡ್ಸ್, ಬುಲ್ ಬುಲ್, ಕಬ್ ಸೇವಾ ದಳಗಳ ಶಿಕ್ಷಕರಾದ ಪ್ರೀತಿ ಜೋಯ್ಸ ಪಿಂಠೋ, ಈವಾ ಜೀತಾ ಬೆನ್ನಿಸ್, ಮಹೇಶ್ ಅವರು ವಿದ್ಯಾರ್ಥಿನಿಯರೊಂದಿಗೆ ಸೇರಿ ಬಣ್ಣಗಳಿಂದ ಆಕರ್ಷಕ ಚಿತ್ರಗಳನ್ನು ಬಿಡಿಸುವ ಮೂಲಕ ಹಣತೆಗಳನ್ನು ವಿಶಿಷ್ಟ ಮಾದಿರಿಯ ಆಚರಿಸುವ ಬಗ್ಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ದೀಪಾವಳಿ ಆಚರಣೆ ಪರಿಸರದ ಸಂರಕ್ಷಣೆಯ ಕುರಿತು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಭೋಧಿಸಿದರು.