

ಮೈಸೂರು: ಅಂಬಿಗರ ಚೌಡಯ್ಯ ಜಯಂತಿಯನ್ನು ಪ್ರತ್ಯೇಕವಾಗಿ ಆಚರಿಸಬೇಕೆಂದು ಗಂಗಾಮತಸ್ಥರ ಸಮುದಾಯ ಒತ್ತಾಯಿಸಿದೆ.
ಜಿಲ್ಲಾಡಳಿತವು ಜ.21ರಂದು ಬೆಳಗ್ಗೆ 11 ಗಂಟೆಗೆ ಕಲಾಮಂದಿರದಲ್ಲಿ ಅಂಬಿಗರ ಚೌಡಯ್ಯ ಜಯಂತಿ ಹಾಗೂ ವೇಮನ ಜಯಂತಿಯನ್ನು ಒಟ್ಟಿಗೆ ಆಚರಿಸಲು ಮುಂದಾಗಿದೆ. ಆಯಾಯ ಸಮುದಾಯದ ಜನ ನಾಯಕರನ್ನು ಸ್ವತಂತ್ರವಾಗಿ ಆಚರಿಸಲು ಮತ್ತು ಸಾಂಸ್ಕೃತಿಕವಾಗಿ ಸಮುದಾಯದ ಹಿರಿಮೆಯನ್ನು ಸಂಭ್ರಮಿಸಲು ಅವಕಾಶ ಮಾಡಿಕೊಟ್ಟು ಅಂಬಿಗರ ಚೌಡಯ್ಯ ಮತ್ತು ವೇಮನ ವ್ಯಕ್ತಿಗಳ ಜಯಂತಿಯನ್ನು ಮಾತ್ರ ಒಟ್ಟಿಗೆ ಆಚರಿಸುತ್ತಿರುವುದು ಖಂಡನೀಯ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾಡಳಿತ ನೆಡಿಸಿದ ಸಭೆಯಲ್ಲಿ ಜನಾಂಗದ ನಾಯಕರು ಪಾಲ್ಗೂಂಡಿದ್ದರು. ಇದರ ಬಗ್ಗೆ ಮುಖಂಡರು ಧ್ವನಿ ಎತ್ತಿದರು ಯಾವುದೇ ಕ್ರಮ ಕೈಗೊಳ್ಳದ ಕಾರಣ ಎರಡು ಜಯಂತಿ ಒಂದೇ ವೇದಿಕೆಯಲ್ಲಿ ಮಾಡುತ್ತಿದ್ದಾರೆ. ಜಿಲ್ಲಾಡಳಿತ ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಹಾಕುವಂತ ಕೆಲಸ ಮಾಡುತ್ತಿದೆ. ಜಿಲ್ಲಾಡಳಿತ ಅಂಬಿಗರ ಚೌಡಯ್ಯ ಜಯಂತಿಯನ್ನು ಪ್ರತ್ಯೇಕವಾಗಿ ಆಚರಿಸದಿದ್ದರೆ ಗಂಗಾಮತಸ್ಥರ ಸಮುದಾಯ ಜಯಂತಿ ಕಾರ್ಯಕ್ರಮವನ್ನು ಬಹಿಷ್ಕರಿಸಲಿದೆ ಎಂದು ಸುಣ್ಣದಕೇರಿ ಗಂಗಾಮತಸ್ಥರ ಸಂಘದ ಪ್ರಕಟಣೆ ತಿಳಿಸಿದೆ.