ಸೀ ಶಕ್ತಿ ಸಂಘಗಳನ್ನು ಬಲಪಡಿಸಿ

nrp 1 A.. (1)
Published on

ಎನ್.ಆರ್.ಪುರ: ಹೈನುಗಾರಿಕೆ, ಕುರಿ ಮತ್ತು ಮೇಕೆ ಸಾಕಾಣಿಕೆ, ಕೋಳಿ ಸಾಕಾಣಿಕೆ ಬಗ್ಗೆ ಸೀ ಶಕ್ತಿ ಸಂಘಗಳಿಗೆ ತರಬೇತಿ ನೀಡಿ ಮಹಿಳೆಯರನ್ನು ಅರ್ಥಿಕವಾಗಿ ಬಲಪಡಿಸಬೇಕು ಎಂದು ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಹೇಳಿದರು.

ತಾಪಂ ಸಾಮರ್ಥ್ಯಸೌಧದಲ್ಲಿ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ರೈತರಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತರಬೇತಿ ಕಾರ್ಯಕ್ರಮಗಳು ಸೀ ಶಕ್ತಿ ಸಂಘಗಳನ್ನು ತಲುಪಬೇಕು. ಇದರಿಂದ ಅವರ ಕುಟುಂಬ ಮತ್ತು ಗ್ರಾಮದ ಅರ್ಥಿಕತೆ ಸುಧಾರಣೆಯಾಗುತ್ತದೆ. ಮಲೆನಾಡು ಭಾಗದಲ್ಲಿ ಅಡಕೆ ಬೆಳೆಗೆ ಎಲೆಚುಕ್ಕೆ ಯಂತಹ ರೋಗಗಳಿಂದ ರೈತರು ತೀವ್ರ ನಷ್ಟ ಅನುಭವಿಸುತ್ತಿದ್ದು, ಹೈನುಗಾರಿಕೆ, ಪಶು ಪಾಲನಾ ಉದ್ಯಮ ಕುರಿತು ಅವರಿಗೆ ತರಬೇತಿ ಮತ್ತು ಉತ್ತೇಜನ ನೀಡಿ ಅವರನ್ನು ಅರ್ಥಿಕವಾಗಿ ಸದೃಢರನ್ನಾಗಿಸಬೇಕು ಎಂದರು.

ಬಸ್ರಿಕಟ್ಟೆ ಪಶು ವೈದ್ಯಾಧಿಕಾರಿ ಡಾ.ಸಿ.ಎಲ್.ಮಣಿಕಾಂತ ಶುದ್ಧ ಹಾಲು ಉತ್ಪಾದನೆ, ಗೋವಿನ ಪ್ರಸವ ಕಾಲದ ಮುಂಜಾಗೃತೆ ಬಗ್ಗೆ ಹಾಗೂ ಜಯಪುರ ಪಶು ವೈದ್ಯಾಧಿಕಾರಿ ಡಾ.ಬಿ.ಎಸ್.ಪವಿತ್ರ ಕರುಗಳ ಪಾಲನೆ, ಕೃತಕ ಗರ್ಭಧಾರಣೆ, ಮಲೆನಾಡು ಪ್ರದೇಶದಲ್ಲಿ ಜಾನುವಾರುಗಳಿಗೆ ಸಾಮಾನ್ಯವಾಗಿ ಕಂಡುಬರುವ ರೋಗಗಳು ಮತ್ತು ಇಲಾಖೆ ಲಸಿಕಾ ಕಾರ್ಯಕ್ರಮಗಳ ಬಗ್ಗೆ ಹಾಗೂ ಬೇಲೂರು ಪಶು ವೈದ್ಯಾಧಿಕಾರಿ ಡಾ.ಎನ್.ಎಲ್.ಅಶೋಕ್ ಸುಧಾರಿತ ಕುರಿ ಮತ್ತು ಮೇಕೆ ಸಾಕಾಣಿಕೆ, ರಸಮೇವು ತಯಾರಿಕೆ ಮತ್ತು ಬಳಕೆ ಬಗ್ಗೆ ತರಬೇತಿ ನೀಡಿದರು.

ಪಶು ಇಲಾಖೆ ಅಧಿಕಾರಿ ಶೇಷಾಚಲ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net