

ಮುಂಡರಗಿ: ಪಟ್ಟಣದ ಪುರಸಭೆ ವ್ಯಾಪ್ತಿಯ 2ನೇ ವಾರ್ಡ್‌ನ ಮುಖ್ಯ ಚರಂಡಿಯ ಮೇಲೆ ನಿರ್ಮಿಸಲಾಗಿದ್ದ ಸಿಡಿ ತುಂಡಾಗಿ ಬಿದ್ದಿದ್ದು, ಜನ-ವಾಹನ ಸಂಚಾರಕ್ಕೆ ತೊಂದರೆಯಾಗಿದೆ.
ಒಂದು ತಿಂಗಳ ಹಿಂದೆಯೇ ಸಿಡಿ ಕಳಚಿ ಬಿದ್ದಿದ್ದು, ಬೈಕ್ ಹೊರತು ಪಡಿಸಿ ಬೇರೊಂದು ವಾಹನ ಇಲ್ಲಿ ಸಂಚರಿಸದಂತಾಗಿದೆ. ಆದರೂ ದುರಸ್ತಿಗೆ ಪುರಸಭೆ ಮುಂದಾಗಿಲ್ಲ. ಕಾರು, ಟ್ರಾೃಕ್ಟರ್ ಮತ್ತಿತರ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಈ ಮಾರ್ಗದಲ್ಲಿನ ಮನೆ ನಿರ್ಮಾಣದ ವಸ್ತುಗಳನ್ನು ಸಾಗಿಸಲು ಜನ ಪರದಾಡುತ್ತಿದ್ದಾರೆ.
ಇನ್ನಾದರೂ ಸಿಡಿ ಸರಿಪಡಿಸುವಂತ ಕೆಲಸ ಮಾಡಲು ಮುಂದಾಗಬೇಕು ಎಂದು ಪುರಸಭೆ ಸದಸ್ಯ ಪ್ರಕಾಶ ಹಲವಾಗಲಿ, ಸ್ಥಳೀಯರಾದ ದ್ಯಾಮಣ್ಣ ಮಸಾಲಿ, ಪ್ರಕಾಶ ಅಬ್ಬಿಗೇರಿ, ಸಿದ್ದಪ್ಪ ಗಾರವಾಳ ಮೊದಲಾದವರು ಒತ್ತಾಯಿಸಿದ್ದಾರೆ.