ಜಾರಕಿಹೊಳಿ ವಿರುದ್ಧದ ಅತ್ಯಾಚಾರ ಕೇಸ್​ನ ತನಿಖಾಧಿಕಾರಿ ಬದಲು!

cd case
Published on

ಬೆಂಗಳೂರು: ರಮೇಶ್ ಜಾರಕಿಹೊಳಿ ವಿರುದ್ಧ ಸಿಡಿ ಲೇಡಿ ದಾಖಲಿಸಿರುವ ಅತ್ಯಾಚಾರ ಕೇಸ್​ನ ತನಿಖಾಧಿಕಾರಿ ಬದಲಾಗಿದ್ದಾರೆ.

ಈ ಹಿಂದೆ ಕಬ್ಬನ್‌ಪಾರ್ಕ್​ ಪೊಲೀಸ್​ ಠಾಣೆ ಇನ್​ಸ್ಪೆಕ್ಟರ್ ಮಾರುತಿ ತನಿಖೆ ನಡೆಸುತ್ತಿದ್ದರು. ಪ್ರಕರಣದ ತನಿಖೆ ನಡೆಸಲು ಎಸಿಪಿ‌ ಕವಿತಾ ಅವರನ್ನು ನೇಮಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್​ ಆದೇಶ ಹೊರಡಿಸಿದ್ದಾರೆ. ಸಂಚಾರಿ ಎಸಿಪಿಯಾಗಿರುವ ನೂತನ ತನಿಖಾಧಿಕಾರಿ ಕವಿತಾ, ವಿಚಾರಣೆಗೆ ಹಾಜರ್ ಆಗುವಂತೆ ಯುವತಿಗೆ ನೋಟಿಸ್ ನೀಡಿದ್ದಾರೆ.

ಇತ್ತ ಸಿಡಿ ಲೇಡಿ ಪ್ರಕರಣವನ್ನ 1ನೇ ಎಸಿಎಂಎಂ ಕೋರ್ಟ್​ಗೆ ವರ್ಗಾವಣೆಯಾಗಿದ್ದು, ಇಂದು ಮಧ್ಯಾಹ್ನ ಕೋರ್ಟ್​ಗೆ ಸಿಡಿ ಲೇಡಿ ಬರುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net