ಅಪರಾಧಿಗಳ ಪತ್ತೆಗೆ ಸಿಸಿಟಿವಿ ಕ್ಯಾಮರಾ ಅಳವಡಿಕೆ

CCTV camera installation to detect criminals
ಚಿಮ್ಮಡ ಗ್ರಾಮದ ಓಂ ಪ್ರಭುಲಿಂಗೇಶ್ವರ ದೇವಸ್ಥಾನದ ಸೇವಾ ಸಮಿತಿಯ ಕಚೇರಿಯಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಬನಹಟ್ಟಿ ಠಾಣಾಧಿಕಾರಿ ಶಾಂತಾ ಹಳ್ಳಿ ಮಾತನಾಡಿದರು. ಎಎಸ್‌ಐ ಶಿವಾನಂದ ಹುದ್ದಾರ, ಗ್ರಾಪಂ ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ, ಆನಂದ ಕವಟಿ, ಪ್ರಕಾಶ ಪಾಟೀಲ, ವಿಜಯಕುಮಾರ ಪೂಜಾರಿ, ಮಹಾಂತೇಶ ಜಾಲಿಕಟ್ಟಿ, ನಾಗಪ್ಪಾ ಆಲಕನೂರ, ತಾಪಂ ಮಾಜಿ ಉಪಾಧ್ಯಕ್ಷ ಪ್ರಭು ಮುಧೋಳ ಮತ್ತಿತರರಿದ್ದಾರೆ.
Published on

ಚಿಮ್ಮಡ: ಪೊಲೀಸರು ದಿನದ 24 ಗಂಟೆಯೂ ಕಣ್ಗಾವಲಿಡಲು ಸಾಧ್ಯವಿಲ್ಲ. ಆದ್ದರಿಂದ ಗ್ರಾಮದ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿದಲ್ಲಿ ಅಪರಾಧಿಗಳನ್ನು ಪತ್ತೆ ಹಚ್ಚುವುದು ಸುಲಭವಾಗಲಿದೆ ಎಂದು ಬನಹಟ್ಟಿ ಠಾಣಾಧಿಕಾರಿ ಶಾಂತಾ ಹಳ್ಳಿ ಹೇಳಿದರು.

ಗ್ರಾಮದ ಓಂ ಪ್ರಭುಲಿಂಗೇಶ್ವರ ದೇವಸ್ಥಾನದ ಸೇವಾ ಸಮಿತಿ ಕಚೇರಿಯಲ್ಲಿ ಶನಿವಾರ ರಾತ್ರಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ವಾಹನಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಿ. ವಿಮೆ ಇಲ್ಲದ ವಾಹನ ಅಪಘಾತವಾದಲ್ಲಿ ತಮ್ಮ ಆಸ್ತಿ ಮಾರಿ ಪರಿಹಾರ ಭರಿಸಬೇಕಾಗುತ್ತದೆ. ಅಲ್ಲದೇ 18 ವರ್ಷದೊಳಗಿನ ಬಾಲಕರಿಗೆ ವಾಹನ ನೀಡಿದಲ್ಲಿ ಪಾಲಕರು ಬೃಹತ್ ಮೊತ್ತದ ದಂಡ ಭರಿಸಬೇಕು ಎಂದರು.

ಗ್ರಾಪಂ ಮಾಜಿ ಅಧ್ಯಕ್ಷ ಪ್ರಭು ಪಾಲಭಾವಿ ಮಾತನಾಡಿ, ಗ್ರಾಮದ ಹಲವಾರು ರೈತರು ಮಹಾರಾಷ್ಟ್ರದ ಹಾಗೂ ಪರಸ್ಥಳದ ಕಬ್ಬು ಕಡಿಯುವ ತಂಡಗಳಿಗೆ ಲಕ್ಷಾಂತರ ಹಣ ಅಡ್ವಾನ್ಸ್ ನೀಡಿದ್ದು, ಅವರು ಹಣವೂ ನೀಡದೆ ಕೆಲಸಕ್ಕೂ ಬರದೆ ಸತಾಯಿಸುತ್ತಿದ್ದಾರೆ. ಅವುಗಳ ವಸೂಲಿಗೆ ರೈತರಿಗೆ ಪೊಲೀಸ್ ಇಲಾಖೆ ನೆರವಾಗಬೇಕು ಎಂದರು.

ಕಾಂಗ್ರೆಸ್ ಯುವ ಧುರೀಣ ಪ್ರವೀಣ ಪೂಜಾರಿ ಮಾತನಾಡಿದರು. ಎಎಸ್‌ಐ ಶಿವಾನಂದ ಹುದ್ದಾರ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ, ಆನಂದ ಕವಟಿ, ಪ್ರಕಾಶ ಪಾಟೀಲ, ವಿಜಯಕುಮಾರ ಪೂಜಾರಿ, ಮಹಾಂತೇಶ ಜಾಲಿಕಟ್ಟಿ, ನಾಗಪ್ಪಾ ಆಲಕನೂರ, ತಾಪಂ ಮಾಜಿ ಉಪಾಧ್ಯಕ್ಷ ಪ್ರಭು ಮುಧೋಳ ಮತ್ತಿತರರಿದ್ದರು.

ಬೀಟ್ ಸಿಬ್ಬಂದಿ ಆರ್.ಬಿ. ಪೂಜಾರಿ, ಬಾಲಚಂದ್ರ ಹೂಗಾರ, ಸತೀಶ ಬೆಳವಾಡಿ, ಪಿ.ಹೆಚ್ ಗಣಿ, ಆನಂದ ಕೋಲೂರ, ಆರ್.ಎಸ್. ಮಾದರ ಹಾಗೂ ಬಸವರಾಜ ಕದಂ ಗ್ರಾಮದಲ್ಲಿ ವಾಸ್ತವ್ಯವಿದ್ದು ಕಾರ್ಯಕ್ರಮಗಳನ್ನು ನಿರ್ವಹಿಸಿದರು. ಗ್ರಾಮದ ಭೀಮನಗರದಲ್ಲಿಯೂ ರಾತ್ರಿ ಪೋಲಿಸರಿಂದ ಸಭೆ ನಡೆಸಿ ಸಾರ್ವಜನಿಕರಲ್ಲಿ ಜಾಗ್ರತಿ ಮೂಡಿಸಲಾಯಿತು ಹಾಗೂ ರಾತ್ರಿ ುಟ್ ಪೆಟ್ರೋಲಿಂಗ್, ಎಂಓಬಿ ಚೆಕಿಂಗ್, ರೌಡಿ ಚೆಕಿಂಗ್, ಗುಡ್ ಮಾರ್ನಿಂಗ್ ಬಿಟ್ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net