ಕಾಲೇಜಿನ ಸಿಸಿ ಕ್ಯಾಮರಾ, ನಲ್ಲಿಗಳಿಗೆ ಹಾನಿ

cctv
Published on

ಹೆಬ್ರಿ: ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಪ್ರೌಢಶಾಲೆ ಆವರಣದ ಸಿಸಿಟಿವಿ ಹಾಗೂ ಅಕ್ಷರ ದಾಸೋಹದ ನಳ್ಳಿಗಳನ್ನು ಕಿಡಿಗೇಡಿಗಳು ಭಾನುವಾರ ರಾತ್ರಿ ಮುರಿದು ಹಾಕಿದ್ದಾರೆ.

ಹೈಸ್ಕೂಲ್ ವಿಭಾಗದ ಮೂರು ಸಿಸಿಟಿವಿಗಳು, ಕಾಲೇಜಿನ ಸಿಸಿಟಿವಿ, ಅಕ್ಷರ ದಾಸೋಹದ ಸುಮಾರು 25 ಕುಡಿಯುವ ನೀರಿನ ನಲ್ಲಿಗಳನ್ನು ಮುರಿದಿದ್ದಾರೆ. ಶೌಚಗೃಹದ ಟ್ಯೂಬ್‌ಲೈಟ್, ಕೇಬಲ್‌ಗಳಿಗೂ ಹಾನಿ ಮಾಡಿದ್ದಾರೆ.

ಈ ಬಗ್ಗೆ ಕಾಲೇಜು ವತಿಯಿಂದ ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪಿಎಸ್‌ಐ ಸುದರ್ಶನ್ ದೊಡ್ಡಮನಿ ತನಿಖೆ ನಡೆಸುತ್ತಿದ್ದಾರೆ. ವಿದ್ಯುತ್ ಇಲ್ಲದಿದ್ದರಿಂದ ಕಿಡಿಗೇಡಿಗಳು ನಡೆಸಿದ ವಿದ್ವಾಂಸಕ ಕೃತ್ಯಗಳು ರೆಕಾರ್ಡ್ ಆಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net