

ವಿಜಯವಾಣಿ ಸುದ್ದಿಜಾಲ ಧಾರವಾಡ
ಕಿರಾಣಾ ಘರಾಣೆಯ ಗಾಯಕಿ ಶುಭಾಂಗಿ ಜಾಧವ ಅವರ ಶಿಷ್ಯೆ ಹಾಗೂ ಶುಭಾಂಗಿ ಅಕಾಡೆಮಿ ಆಫ್ ಮ್ಯೂಸಿಕ್ ವಿದ್ಯಾರ್ಥಿನಿ, ನವನಗರದ ಶಿವಾನಿ ಕವಠೇಕರ ಭಾರತ ಸರ್ಕಾರ ಸಂಸ್ಕೃತಿ ಸಚಿವಾಲಯದ ಪ್ರತಿಷ್ಠಿತ ಸಿಸಿಆರ್ಟಿ ಶಿಷ್ಯವೇತನಕ್ಕೆ ಆಯ್ಕೆಯಾಗಿದ್ದಾಳೆ.
ಹುಬ್ಬಳ್ಳಿ ರಾಜನಗರದ ಪಿಎಂಶ್ರೀ ಕೇಂದ್ರೀಯ ವಿದ್ಯಾಲಯದ 10ನೇ ತರಗತಿ ವಿದ್ಯಾರ್ಥಿನಿ ಶಿವಾನಿ, ಶುಭಾಂಗಿ ಜಾಧವ ಅವರಲ್ಲಿ 8 ವರ್ಷಗಳಿಂದ ಸಂಗೀತ ಅಧ್ಯಯನ ನಡೆಸಿದ್ದಾಳೆ. ಸಿಸಿಆರ್ಟಿಯ ಸಿಟಿಎಸ್ ಸ್ಕೀಂ ನ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಗಾಯನ ವಿಭಾಗದಲ್ಲಿ ಆಯ್ಕೆಯಾಗಿರುವ ಶಿವಾನಿ ಸಾಧನೆಗೆ ಗುರು ಶುಭಾಂಗಿ ಜಾಧವ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.