

ಹುಬ್ಬಳ್ಳಿ: ಶುಭಾಂಗಿ ಅಕಾಡೆಮಿ ಆ್ ಮ್ಯೂಜಿಕ್ ವಿದ್ಯಾರ್ಥಿನಿ ನವನಗರದ ಶಿವಾನಿ ಕವಠೇಕರ ಅವರು ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಸಿ.ಸಿ.ಆರ್.ಟಿ ಶಿಷ್ಯವೇತನಕ್ಕೆ ಆಯ್ಕೆಯಾಗಿದ್ದಾರೆ.
ಪಿಎಂಶ್ರೀ ಕೇಂದ್ರೀಯ ವಿದ್ಯಾಲಯದ 10ನೇ ತರಗತಿ ವಿದ್ಯಾರ್ಥಿನಿಯಾಗಿರುವ ಶಿವಾನಿ, ಕಿರಾನಾ ಘರಾಣೆ ಗಾಯಕಿ ಶುಭಾಂಗಿ ಜಾಧವ ಅವರ ಶಿಷ್ಯೆ. ಕಳೆದ 8 ವರ್ಷಗಳಿಂದ ಅವರ ಬಳಿ ಸಂಗೀತಾಧ್ಯಯನ ಮಾಡುತ್ತಿದ್ದಾರೆ. ಸಿಸಿಆರ್‌ಟಿಯ ಸಿಟಿಎಸ್ ಸ್ಕೀಮ್‌ನ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಗಾಯನ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ.