ಸಿಸಿ ರಸ್ತೆ ಕಾಮಗಾರಿಗೆ ಚಾಲನೆ

12 ktl 02
ಕವಿತಾಳ ಸಮೀಪದ ಅಮೀನಗಡದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಆರ್ ಬಸನಗೌಡ ತುರ್ವಿಹಾಳ ಚಾಲನೆ ನೀಡಿದರು. ಪ್ರಮುಖರಾದ ದೇವಯ್ಯತಾತ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ, ಗ್ರಾಪಂ ಅಧ್ಯಕ್ಷೆ ಬಸವಲಿಂಗಮ್ಮ ನಾಯಕ, ಎಸ್‌ಡಿಎಮ್‌ಸಿ ಅಧ್ಯಕ್ಷ ಬುಡ್ಡಪ್ಪ ಹರಿಜನ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮೈಬುಬಸಾಬ್ ಮುದ್ದಾಪೂರ ಉಪಸ್ಥಿತರಿದ್ದರು.
Published on

ಕವಿತಾಳ: ಅಮೀನಗಡ ಸರ್ಕಾರಿ ಪ್ರೌಢಶಾಲೆಗೆ ಸಂಪರ್ಕಿಸುವ ರಸ್ತೆ ಕಾಮಗಾರಿಗೆ ಶಾಸಕ ಆರ್. ಬಸನಗೌಡ ತುರ್ವಿಹಾಳ ಸೋಮವಾರ ಚಾಲನೆ ನೀಡಿದರು.

ಕೆಲ ತಿಂಗಳ ಹಿಂದೆ ಶಾಲೆಯ ಎಸ್‌ಡಿಮ್‌ಸಿ ಅಧ್ಯಕ್ಷ, ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮವೊಂದರಲ್ಲಿ ಶಾಸಕರಿಗೆ ಸಿಸಿ ರಸ್ತೆ ನಿರ್ಮಿಸುವಂತೆ ಮನವಿಪತ್ರ ಸಲ್ಲಿಸಿದ್ದರು.

ಕರ್ನಾಟಕ ಯೋಜನೆಯ 2023-24ನೇ ಸಾಲಿನ ಅಡಿಯಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆಗೆ ಚಾಲನೆ ನೀಡಿ, ನೀಡಿದ ಭರವಸೆಯಂತೆ ಸಿಸಿ ರಸ್ತೆಯನ್ನು ಮಾಡಲಾಗಿದೆ ಎಂದರು. ತುಗ್ಗಲದಿನ್ನಿ ಕ್ಯಾಂಪ್, ಗುಡಿಹಾಳ ಆನಂದಗಲ್, ಢೋಣಮರಡಿ, ಮೈಬೂಬನಗರ ಕ್ಯಾಂಪ್‌ನಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net