1.4 ಕೋಟಿ ವೆಚ್ಚದಲ್ಲಿ ಸಿ.ಸಿ.ರಸ್ತೆ ಕಾಮಗಾರಿ

FotoJet (2)
Published on

 ಚಿಕ್ಕನಾಯಕನಹಳ್ಳಿ: ತಾಲೂಕಿನ ವಿವಿಧ ತಾಂಡಾಗಳಲ್ಲಿ 1.4 ಕೋಟಿ ವೆಚ್ಚದಲ್ಲಿ ಸಿ.ಸಿ.ರಸ್ತೆ ಕಾಮಗಾರಿಗೆ ಹಾಗೂ 20 ಲಕ್ಷ ವೆಚ್ಚದಲ್ಲಿ ಸೋರಲಮಾವು ಗ್ರಾಮದ ಸ್ಮಶಾನಭಿವೃದ್ಧಿಗೆ ಗುರುವಾರ ಚಾಲನೆ ನೀಡಿದ್ದು, ಇದರೊಂದಿಗೆ ಶಾಲೆಗಳಿಗೆ ಭೇಟಿ ನೀಡುವುದು ನಮ್ಮ ಜವಾಬ್ದಾರಿ ಎಂದು ಶಾಸಕ ಸಿ.ಬಿ.ಸುರೇಶ್​ಬಾಬು ತಿಳಿಸಿದರು.

ತಾಲೂಕಿನ ಬೆಳಗುಲಿ ಪ್ರೌಢಶಾಲೆಗೆ ಭೇಟಿ ನೀಡಿ ಮಾತನಾಡಿದ ಅವರು, ಎಸ್ಸೆಸ್ಸೆಲ್ಸಿಯಲ್ಲಿ ಕಳೆದೆರಡು ವರ್ಷಗಳಿಂದ ಜಿಲ್ಲೆಮಟ್ಟದಲ್ಲಿ ನಮ್ಮ ತಾಲೂಕು ಪ್ರಥಮ ಸ್ಥಾನಗಳಿಸಿದ್ದು, ಅದಕ್ಕೆ ಇಲ್ಲಿನ ಶಿಕ್ಷಕರು ಹಾಗೂ ಮಕ್ಕಳೇ ಕಾರಣ. ಆದ್ದರಿಂದ ಪ್ರತಿಭ ಾನುವಾರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ ಆಯೋಜಿಸಿದ್ದು, ಮಕ್ಕಳು ಇದನ್ನು ಬಳಸಿಕೊಂಡು ನಿರಂತರ ಅಧ್ಯಯನದಲ್ಲಿ ತೊಡಗಬೇಕು. ನಮ್ಮ ತಾಲೂಕಿನಲ್ಲಿರುವ ಸರ್ಕಾರಿ, ಅನುದಾನಿತ, ಅನುದಾನ ರಹಿತ ಎಂಬ ಭೇದ ಭಾವವಿಲ್ಲದೇ ಎಲ್ಲ ಶಾಲೆಯ ವಿದ್ಯಾರ್ಥಿಗಳಿಗೂ ನಮ್ಮಲ್ಲಿರುವ ಶಿಕ್ಷಕರನ್ನೇ ಬಳಸಿಕೊಂಡು ಅವರಿಂದ ನಿರಂತರವಾಗಿ ಶಿಬಿರಗಳನ್ನು ಮಾಡಿ ಮಕ್ಕಳಲ್ಲಿ ಪರೀೆಯ ಭಯ ಹೋಗಿಸಿ ಅವರಲ್ಲಿ ದೃಢತೆ ಮೂಡಿಸಿ ಕಲಿಕೆಯಲ್ಲಿ ತೊಡಗುವಂತೆ ಮಾಡುತ್ತಿದ್ದಾರೆ ಎಂದರು.

ತಾಲೂಕಿನ ಹಂದನಕೆರೆ ಹೋಬಳಿ ಹಾಗೂ ಹುಳಿಯಾರು ಹೋಬಳಿಯ ಹಲವಾರು ತಾಂಡಗಳಲ್ಲಿ ಒಟ್ಟು 1 ಕೋಟಿ 40ಲಕ್ಷ ವೆಚ್ಚದಲ್ಲಿ ತಾಲೂಕಿನ ಮಲ್ಲೇನಹಳ್ಳಿ ತಾಂಡಾ, ಟಿ.ತಾಂಡಾ, ನಿರುವಗಲ್​ ಕಾಲನಿ, ಬೆಳಗುಲಿ ಕಾಲನಿ, ಎಂ.ಎಚ್​.ಕಾಲನಿ, ಬೈರಾಪುರ ಕೋಡಿತಾಂಡಾ, ಚಿಕ್ಕಬಿದರೆ ರಾಮನಾಯ್ಕ ತಾಂಡಾ, ಸೋಮನಹಳ್ಳಿ ತಾಂಡಾ, ನಾನ್ಯಾನಾಯ್ಕನ ತಾಂಡಾ, ಬಾದಿಹಟ್ಟಿ, ಉಮ್ಲಾನಾಯ್ಕನ ತಾಂಡಾ, ಮರೆನಡು ಪಾಳ್ಯ, ದಬ್ಬಗುಂಟೆ ಬೋವಿಕಾಲನಿಗಳಲ್ಲಿ ಸಿಸಿ ರಸ್ತೆಗಳ ನಿರ್ಮಾಣಕ್ಕೆ ಹಾಗೂ 20ಲಕ್ಷ ವೆಚ್ಚದಲ್ಲಿ ಸೋರಲಮಾವು ಗ್ರಾಮದ ಸ್ಮಾಶಾನ ಅಭಿವೃದ್ಧಿಗೆ ಭೂಮಿ ಪೂಜೆ ನೆರವೆರಿಸಿದ್ದು, ಸಾರ್ವಜನಿಕರು ಇವುಗಳನ್ನು ಬಳಸಿಕೊಳ್ಳುವಂತೆ ತಿಳಿಸಿದರು.

ತಾಪಂ ಮಾಜಿ ಅಧ್ಯೆ ಚೇತನಾ ಗಂಗಾಧರ್​, ಮುಖಂಡರಾದ ಮರಿಯಪ್ಪ, ಸ್ಥಳಿಯ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net