

ವಿಜಯವಾಣಿ ಸುದ್ದಿಜಾಲ ಇಂಡಿ
ತಾಲೂಕಿನ ಗುಬ್ಬೇವಾಡ ಗ್ರಾಮದಲ್ಲಿ ಅಲ್ಪಸಂಖ್ಯಾತರ ಕಾಲನಿಯಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಲಾಯಿತು.
ಶಾಸಕ ಯಶವಂತರಾಯಗೌಡ ಪಾಟೀಲರು ಅಲ್ಪಸಂಖ್ಯಾತರ ಪರವಾದ ಅಪಾರ ಕಾಳಜಿ ಹೊಂದಿದ್ದಾರೆ. ಕಾಂಗ್ರೆಸ್ ಪಕ್ಷದ ತತ್ವ-ಸಿದ್ಧಾಂತಕ್ಕೆ ಬದ್ಧರಾಗಿ ಸರ್ವಜನಾಂಗದ ಕಲ್ಯಾಣಕ್ಕೆ ಶ್ರಮಿಸುತ್ತಿದ್ದಾರೆ. ಗುಬ್ಬೇವಾಡ ಗ್ರಾಮದ ಅಲ್ಪಸಂಖ್ಯಾತರ ಕಾಲನಿಯಲ್ಲಿ 2023-24 ನೇ ಸಾಲಿನ 20 ಲಕ್ಷ ರೂಪಾಯಿ ನುದಾನದಡಿ ಸಿಸಿ ರಸ್ತೆ ಕಾಮಗಾರಿ ಕೈಗೊಂಡಿರುವುದು ಅವರ ಕಾಳಜಿಗೆ ಕೈಗನ್ನಡಿ ಎಂದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಚಂದುಸಾವಕಾರ ಮರಗೂರ, ಸಿದ್ಧಾರೂಢ ಮರಗೂರ, ಪಂಚಪ್ಪ ಮರಗೂರ, ಆನಂದ ಚಾಂದಕವಟೆ, ಸುರೇಶ ಆಲೂರ, ಅಮೃತ ಮರಗೂರ, ಹಸನಸಾಬ ಕಸಾಯಿ, ಸಿದ್ಧರಾಮ ಕೋಳಿ, ಮಶಾಕ ದೇವಣಗಾಂವ, ಮಾಣಿಕ ಪೂಜಾರಿ, ಮೈಬೂಬ ಶಿವೂರ ಹಾಗೂ ಮುಖಂಡ ಅಲ್ಲಾಭಾಷಾ ಶಿವೂರ ಮತ್ತಿತರರಿದ್ದರು.