

ವಿಜಯವಾಣಿ ಸುದ್ದಿಜಾಲ ಗದಗ
ವಿಧಾನಸೌಧದ ಮೂರನೇ ಮಹಡಿ (ಸಿಎಂ ಕಚೇರಿ, ಸಚಿವಾಲಯ) ಆಸೆಗಾಗಿ ರಾಜ್ಯ ಬೊಕ್ಕಸದ ಪೂರ್ವಾಪರ ಯೋಜನೆಗಳಿಲ್ಲದೇ ಕಾಂಗ್ರೆಸ್ ಹಲವು ಗ್ಯಾರಂಟಿ ನೀಡಿದೆ. ಗ್ಯಾರಂಟಿ ಯೋಜನೆಗಳನ್ನು ಸ್ವಾಗತಿಸುತ್ತೇವೆ ಆದರೆ, ಅವುಗಳನ್ನು ಸಮರ್ಪಕ ಜಾರಿ ಮಾಡಲು ಕಾಂಗ್ರೆಸ್ ಎಡವಿದೆ ಎಂದು ಮಾಜಿ ಸಚಿವ, ಶಾಸಕ ಸಿ.ಸಿ. ಪಾಟೀಲ ಆರೋಪಿಸಿದರು.
ಗದಗನಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅತೀ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರಿಗೆ ಹಣಕಾಸು ವಿಷಯದಲ್ಲಿ ಸಾಕಷ್ಟು ಜ್ಞಾನ ಇದೆ. ಅವರಿಂದ ಇಂತಹ ನಿರ್ಧಾರ ನಿರೀಸಿರಲಿಲ್ಲ. 2023ರ ಚುನಾವಣಾ ಲಿತಾಂಶ ಆಜೀವ ಲಿತಾಂಶ ಎನ್ನುವಂತೆ ಕಾಂಗ್ರೆಅಸ್ ವತಿರ್ಸುತ್ತಿದೆ. 2028ಕ್ಕೆ ಮತ್ತೊಮ್ಮೆ ಚುನಾವಣೆ ಬರಲಿದೆ ಎಂಬುದು ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ತಿಳಿದಿರಲಿ. ಈಗಿರುವ ಕಾಂಗ್ರೆಸ್ ಸರ್ಕಾರ ಸಮ್ಮಿಶ್ರ ಸರ್ಕಾರದಂತಿದೆ. ಕೆಲ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಮಾತಿನ ಮೇಲೆ ಹಿಡಿತವವೇ ಇಲ್ಲ. ಸಿದ್ದರಾಮಯ್ಯ ಅವರಿಗೆ ತಿಳಿ ಹೇಳಬೇಕು ಎಂದರು.
ಫ್ರೀ ಅಂದವರಿಂದ ಡಬಲ್ ವಸೂಲಿ:
ನನಗೂ ಫ್ರೀ, ನಿನಗೂ ಫ್ರೀ ಎನ್ನುತ್ತಿದ್ದ ಕಾಂಗ್ರೆಸ್ ಪಕ್ಷದಿಂದ ನನಗೂ ಡಬಲ್, ನಿನಗೂ ಡಬಲ್ ಬಿಲ್ ನೀಡುತ್ತಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ತನ್ನ ಮಾತನ್ನು ಉಳಿಸಿಕೊಳ್ಳಬೇಕಾದರೆ 10 ಕೆಜಿ ಅಕ್ಕಿ ಜನರಿಗೆ ವಿತರಿಸಬೇಕು. ಕೇಂದ್ರ ಸರ್ಕಾರ ಈಗಾಗಲೇ 5 ಕೆಜಿ ನೀಡುತ್ತಿದೆ. ಬಿಜೆಪಿ ಸರ್ಕಾರ ಇರುವ ರಾಜ್ಯದಲ್ಲೂ ಕೇಂದ್ರ ಹೆಚ್ಚುವರಿ ಅಕ್ಕಿ ನೀಡುತ್ತಿಲ್ಲ. ಇಷ್ಟು ದಿನ ಕೇಂದ್ರ ಸರ್ಕಾರ ಅಕ್ಕಿ ವಿತರಿಸುತ್ತಿತ್ತು ಎಂದು ಜನರಿಗೆ ಮನವರಿಕೆ ಮಾಡಿ ಕೊಟ್ಟಿದ್ದಕ್ಕೆ ಕಾಂಗ್ರೆಸ್ಸಿಗೆ ಧನ್ಯವಾದ ಎಂದು ಪಾಟೀಲ ಕುಟುಕಿದರು.
ಕಾಂಗ್ರೆಸ್ ತಟ್ಟೆ ಹಿಡಿದು ನಿಲ್ಲುತ್ತಿದೆ:
ಪರ ರಾಜ್ಯದ ಹಾಲು ಬೇಡ ಎಂದವರು ಪರ ರಾಜ್ಯದ ಅಕ್ಕಿಗೆ ತಟ್ಟೆ ಹಿಡಿದು ನಿಲ್ಲುತ್ತಿದ್ದಾರೆ ಎಂದು ಕಿಡಿಕಾರಿದ ಸಿ.ಸಿ. ಪಾಟೀಲ, ಕಲ್ಕಡ್ ಪ್ರಭಾಬಕರ್ ಭಟ್ ಅವರ ಶಾಲಾ ಮಕ್ಕಳಿಗೆ ಅಕ್ಕಿ ನೀಡದೇ ನಿಂಧಿಸಿದ ಪ್ರಕರಣ ಇನ್ನೂ ಮಾಸಿಲ್ಲ. ಈಗ ಬೇರೆ ರಾಜ್ಯಗಳ ಅಕ್ಕಿಗೆ ಕಾಂಗ್ರೆಸ್ ಬೇಡಿಕೆ ಇಡುತ್ತಿದೆ. 10 ಕೆಜಿ ಅಕ್ಕಿ ಕೊಡದಿದ್ದರೆ, 10 ಕೆಜಿ ಅಕ್ಕಿಯ ಬೆಲೆಯನ್ನು ಜನರ ಖಾತೆಗೆ ನೇರವಾಗಿ ಜಮೆ ಮಾಡಬೇಕು ಎಂದು ಕಾಂಗ್ರೆಸ್ ಪಕ್ಷವನ್ನು ಆಗ್ರಹಿಸಿದರು.
ಸಂಪುಟಕ್ಕೆ ಅಧಿಕಾರ ಇದೆ:
ವಿದ್ಯುತ್ ದರ ಏರಿಕೆ ಮಾಡಿ ಜನರಿಗೆ ಕಾಂಗ್ರೆಸ್ ಮೋಸ ಮಾಡಿದೆ. ಗೋಹತ್ಯೆ, ಮತಾಂತರ ಕಾಯ್ದೆ ವಾಪಾಸ್ ಪಡೆಯುವ ಅಧಿಕಾರ ಸಚಿವ ಸಂಪುಟಕ್ಕೆ ಇದೆ ಎಂದಾದರೆ ಕೆಇಆರ್ಸಿ ಜಾರಿ ಮಾಡಿದ ಆದೇಶ ಹಿಂಪಡೆದು, ವಿದ್ಯುತ್ ದರ ಇಳಿಕೆ ಮಾಡುವ ಅಧಿಕಾರ ಸಚಿವ ಸಂಪಟಕ್ಕೆ ಇಲ್ಲವೇ ಎಂದು ಸಿ.ಸಿ. ಪಾಟೀಲ ಪ್ರಶ್ನಿಸಿದರು. ಗೃಹಜ್ಯೋತಿ ಸರ್ವರ್ ಹ್ಯಾಕ್ ಆಗಿದೆ ಎಂದು ಓರ್ವ ಸಚಿವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷದ ಕೆಲ ಸಚಿವರಿಗೆ ಏನು ಮಾತನಾಡಬೇಕು, ಏನು ಮಾತನಾಡಬಾರದು ಎಂಬುದು ತಿಳಿಯುತ್ತಿಲ್ಲ. ಅಧಿಕಾರ ಬಂದು ಒಂದೂವರೆ ತಿಂಗಳಿಂದ ಅಭಿವೃದ್ಧಿ ಕೆಲಸದ ಬಗ್ಗೆ ಕಾಂಗ್ರೆಸ್ ಮಾತನಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಎಸ್.ವಿ. ಸಂಕನೂರು, ಶಿವಣ್ಣ ಮುಳಗುಂದ, ಉಷಾ ದಾಸರ, ವಿಜಯಲಕ್ಷಿ$್ಮ ಮಾನ್ವಿ ಇತರರು ಇದ್ದರು.