ಜಾತಿಗಣತಿ ವರದಿಯಲ್ಲಿ ಹಲವು ನ್ಯೂನ್ಯತೆ! ವರದಿ ಒಪ್ಪದಿರಲು ಸಿಸಿಪಿ ಆಗ್ರಹ:

13GDG01
Published on

ಕಾಂತರಾಜು ವರದಿ ಅವೈಜ್ಞಾನಿಕ! ಸರ್ಕಾರ ವರದಿ ತಿರಸ್ಕರಿಸಬೇಕು

ವಿಜಯವಾಣಿ ಸುದ್ದಿಜಾಲ, ಗದಗ

ಸಿಎಂ ಸಿದ್ದರಾಮಯ್ಯ ಅವರು ತಮ್ಮ ಆಡಳಿತದ ವೈಲ್ಯ ಮರೆಮಾಚಲು ಆಗಾಗ ದಾಳಗಳನ್ನು ಉರುಳಿಸುತ್ತಾರೆ. ಅಂತಹ ದಾಳಗಳಲ್ಲಿ ಕಾಂತರಾಜು ಅವರು ಸಿದ್ಧಪಡಿಸಿದ ಜಾತಿಗಣತಿ ವರದಿ ಸ್ವೀಕಾರವು ಒಂದಾಗಿದೆ. ಜಾತಿಗಣತಿ ವಿಷಯವನ್ನು ತೇಲಿಬಿಟ್ಟು ಜನರನ್ನು ಭಾವನಾತ್ಮಕವಾಗಿ ಬೇರೆಡೆ ತಿರುಗಿಸಿ ತಮ್ಮ ಆಡಳಿತದ ವೈಲ್ಯ ಮುಚ್ಚಿಹಾಕುತ್ತಾರೆ ಎಂದು ಮಾಜಿ ಸಚಿವ. ಶಾಸಕ ಸಿ.ಸಿ. ಪಾಟೀಲ ಹೇಳಿದರು.

ನಗರಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದುಳಿದ ವರ್ಗದವರನ್ನು ಗುರುತಿಸಿ, ಸಾಮಾಜಿಕ, ಆಥಿರ್ಕ ಮತ್ತು ಶೈಕ್ಷಣಿಕವಾಗಿ ಸುಧಾರಿಸುವ ಪ್ರಕ್ರಿಯೆಗೆ ನಮ್ಮ ವಿರೋಧ ಇಲ್ಲ. ಆದರೆ, ಕಾಂತರಾಜು ವರದಿ ಸಂರ್ಪೂಣ ಅವೈಜ್ಞಾನಿಕವಾಗಿದೆ. ವರದಿಯಲ್ಲಿ ಗುಳೆ ಹೋದವರ ಮಾಹಿತಿಯಿಲ್ಲ. ಒಕ್ಕಲಿಗ, ವೀರಶೈವ ಲಿಂಗಾಯತ ಸಮುದಾಯವು ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿದೆ. ಜಾತಿಗಣತಿ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಭಾಗಶಃ ಮನೆಗಳಿಗೆ ಸದಸ್ಯರು ಬಂದು ಸಮೀಕ್ಷೆ ನಡೆಸಿಲ್ಲ. ಕಾಂಗ್ರೆಸ್ಸಿನ ಶಾಮನೂರು ಶಿವಶಂಕ್ರಪ್ಪ, ಡಿಸಿಎಂ ಡಿ.ಕೆ. ಶಿವಕುಮಾರ ಕೂಡ ಜಾತಿಗಣತಿ ವರದಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಕಾಂಗ್ರೆಸ್​ ಶಾಸಕಾಂಗ ಸಭೆಯಲ್ಲಿ ಶಾಸಕರು ವರದಿ ಸ್ವೀಕೃತಿಗೆ ವಿರೋಧ ವ್ಯಕ್ತಪಡಿಸಬೇಕು ಎಂದು ಆಗ್ರಹಿಸಿದರು. ಒಪ್ಪಿದರೆ ಚುನಾವಣೆಯಲ್ಲಿ ಕಾಂಗ್ರೆಸ್​ ಶಾಸಕರಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

ಜಾರಕಿಹೊಳಿ ಹೇಳಿಕೆಗೆ ವಿರೋಧ:

ಲೋಕೋಪಯೋಗಿ ಇಲಾಖೆಯಲ್ಲಿನ ಬಾಕಿ ಬಿಲ್​ ಸಂಬಂಧ ಸಚಿವ ಸತೀಶ ಜಾರಕಿಹೊಳಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಸಿ.ಸಿ. ಪಾಟೀಲ, ಹಿಂದಿನ ಅವಧಿಯಲ್ಲಿ ಜಾರಕಿಹೊಳಿ ಕ್ಷೇತ್ರಕ್ಕೂ ಅನುದಾನ ಕೊಟ್ಟಿದ್ದೇನೆ. ಕ್ಷೇತ್ರದಲ್ಲಿ ಅವರಿಗೆ ರಸ್ತೆ ನಿರ್ಮಾಣ ಆಗಬೇಕು. ಆದರೆ, ಬಿಲ್​ ಬಾಕಿ ಪಾವತಿ ವೇಳೆ ಹಿಂದಿನ ಸರ್ಕಾರದ ಕಾಮಗಾರಿ ಎಂದು ಆರೋಸಿರುವುದು ಆಕ್ಷೇಪಾರ್ಹ. ಕಾಂಗ್ರೆಸ್​ ಸರ್ಕಾರದಲ್ಲಿ ಎಲ್ಲರೂ ಪೇಪರ್​ ಎಂಎಲ್​ಎ ಆಗಿದ್ದೇವೆ. ಕ್ಷೇತ್ರಕ್ಕೆ ಅನುದಾನ ಇಲ್ಲದೇ ದಾಖಲೆಗಳಿಗೆ ಸಹಿ ಮಾಡಲು ಮಾತ್ರ ನಾವು ಸೀಮಿತ ಆಗಿದ್ದೇವೆ ಎಂದು ವ್ಯಂಗ್ಯವಾಡಿದರು.

ಜಮೀರ್​ ಗೆ ನೋವು ಗೊತ್ತಿಲ್ಲ:

ಸುದ್ದಿಗೋಷ್ಟಿಯಲ್ಲಿ ಆಕಳ ಕೆಚ್ಚಲು ಕೊಯ್ದ ಟನೆ ವಿಷಯ ಪ್ರಸ್ತಾಪಿಸಿದರು, ಸಚಿವ ಜಮೀರ ಅಹಮ್ಮದ ಅವರು ಆಕಳು ಕೊಡಿಸುತ್ತೇನೆ ಎಂದು ಹೇಳುತ್ತಾರೆ. ಆದರೆ ಆಕಳು ಅನುಭವಿಸಿದ ನೋವು ನಿಮಗೇನು ಗೊತ್ತಾಗುತ್ತದೆ ಎಂದು ಜಮೀರ್​ಗೆ ಸಿ.ಸಿ. ಪಾಟೀಲ ಪ್ರಶ್ನಿಸಿದರು.

ಡಿಕೆಶಿ ಹೇಳಿದಂತೆ ನಡೆದಿದೆ:

ಲಕ್ಷಿ$್ಮ ಹೆಬ್ಬಾಳ್ಕರ ಅವರಿಗೆ ಅವಾಚ್ಯ ಶಬ್ಧ ಬಳಸಿದ್ದಾರೆ ಎಂದು ಸಿ.ಟಿ. ರವಿ ಮೇಲಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ಮಾಧ್ಯಮಗಳು ಇಲ್ಲದಿದ್ದರೆ ಸಿ.ಟಿ. ರವಿ ಬದುಕುತ್ತಿರಲಿಲ್ಲ. ಬಂಧಿಸಿದ ನಂತರ ರಾತ್ರೋ ರಾತ್ರಿ ನಾಲ್ಕಾರು ಜಿಲ್ಲೆಯಲ್ಲಿ ರವಿ ಅವರನ್ನು ಸುತ್ತಾಡಿಸಿದ್ದಾರೆ. ಕಬ್ಬಿನ ಗದ್ದೆ, ಹೊಲ, ಕ್ರಷರ್​ ಸೇರಿದಂತೆ ಹಲವಡೆ ಕರೆದುಕೊಂಡು ಹೋಗುವ ಅವಶ್ಯಕತೆ ಏನಿತ್ತು? ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರಿಗೇ ರಾತ್ರಿ ನಡೆದ ಟನೆಗಳ ಬಗ್ಗೆ ಗೊತ್ತೇ ಇಲ್ಲ. ಎಲ್ಲವೂ ಡಿ.ಕೆ. ಶಿವಕುಮಾರ ಹೇಳಿದಂತೆ ಪೊಲೀಸರು ಕೇಳಿದ್ದಾರೆ ಎಂದು ಆರೋಪಿಸಿದರು. ಸದನದಲ್ಲಿ ನಡೆದ ಟನೆ ಬಗ್ಗೆ ಸಭಾಧ್ಯಕ್ಷ, ಸಭಾಪತಿ ಅವರೇ ನಿರ್ಣಯಿಸಬೇಕು. ಸಿಓಡಿ ತನಿಖೆಗೆ, ಸ್ಥಳ ಮಹಜರು ನಡೆಸಲು ಸಾಧ್ಯವೇ ಇಲ್ಲ. ಶಂಕರ ಬಿದರಿ ಅವರು ಈ ಹಿಂದೆ ಸದನದ ಒಳಗೆ ಬಂದಾಗ ಸಿದ್ಧರಾಮಯ್ಯ ಅವರು ಯಾವ ರೀತಿ ನಡೆದುಕೊಂಡಿದ್ದರು ಎಂದು ತಿಳಿದಿದೆ. ಕಾಂಗ್ರೆಸ್ಸಿಗೇ ಒಂದು ನ್ಯಾಯ, ಬಿಜೆಪಿಗೆ ಒಂದು ನ್ಯಾಯವೇ? ಎಂದು ಸಿ.ಸಿ. ಪಾಟೀಲ ಪ್ರಶ್ನಿಸಿದರು.

ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಎಂ.ಎಸ್​. ಕರೀಗೌಡ್ರ, ಶ್ರೀಪತಿ ಉಡಪಿ, ಶಿವು ಹಿರೇಮನಿಪಾಟೀಲ, ಅನೀಲ ಅಬ್ಬಿಗೇರಿ, ಮಹೇಶ ದಾಸರ ಇತರರು ಇದ್ದರು.

ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸಲು ರಾಜ್ಯ ಸರ್ಕಾರದ ಬಳಿ ಹಣವಿಲ್ಲ. ಆದರೆ, ಗ್ಯಾರಂಟಿ ಸಮಿತಿ ಅಧ್ಯಕ್ಷರಿಗೆ 25 ಸಾವಿರ, 40 ಸಾವಿರ ಗೌರವಧನ ನೀಡಲು ಸರ್ಕಾರದ ಬಳಿ ಹಣವಿದೆ. ಗ್ಯಾರಂಟಿ ಅನುಷ್ಠಾನಕ್ಕೆ ಒಂದು ಕಚೇರಿ ಮತ್ತು ಅದಕ್ಕೆ ಖರ್ಚು ವೆಚ್ಚಗಳನ್ನು ಭರಿಸಲು ಸರ್ಕಾರದ ಬಳಿ ಹಣವಿದೆ. ಅಂಗನವಾಡಿ ಕಾರ್ಯಕರ್ತರಿಗೆ ಗೌರವಧನ ಹೆಚ್ಚಿಸಲು ಮಾತ್ರ ಕಾಂಗ್ರೆಸ್​ ಸರ್ಕಾರದ ಬಳಿ ಹಣವಿಲ್ಲ ಎಂದು ಸಿ.ಸಿ. ಪಾಟೀಲ ವ್ಯಂಗ್ಯವಾಡಿದರು. ಅಂಗನವಾಡಿ ಕಾರ್ಯಕರ್ತರ ಬದುಕು ಕಷ್ಠದಲ್ಲಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಎಲ್ಲರ ಆದೇಶವನ್ನು ಅವರು ಪಾಲೀಸಬೇಕಾಗಿರುತ್ತದೆ. ತೀವ್ರ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಅಂತವರಿಗೆ 15 ಸಾವಿರ ಗೌರವ ಧನ ನಿಡಬೇಕು ಎಂದು ಆಗ್ರಹಿಸಿದರು.

ನರಗುಂದ ಕ್ಷೇತ್ರದ ಮಾಜಿ ಶಾಸಕ ಬಿ.ಆರ್​. ಯಾವಗಲ್ಲ ಅವರಿಗೆ ಸುಪರ್​ ಎಂಎಲ್​ಎ ಎಂದು ಟೀಕಿಸಿದ ಸಿ.ಸಿ. ಪಾಟೀಲ, ನಾನೂ ಸಿಟ್ಟಿಂಗ್​ ಎಂಎಲ್​ಎ ಆದರೂ ಅವರೇ ಎಲ್ಲ ಕೆಲಸಗಳಿಗೆ ಅಂತಿಮ ಮುದ್ರ ಒತ್ತುತ್ತಾರೆ ಎಂದು ಆರೋಪಿಸಿದರು. ಅವರ ಇಬ್ಬರು ಮಕ್ಕಳು ಮತ್ತು ಅವರು ಬಳಿ ಎಲ್ಲ ಬಾಕಿ ಬಿಲ್​ಗಳು ಬಂದು ಹೋಗುತ್ತವೆ. ನಾವು ಕೇವಲ ಪೇಪರ್​ ಎಂ.ಎಲ್​.ಎ ಆಗಿದ್ದೇವೆ ಎಂದರು. ನನ್ನನ್ನು ಸಿಟ್ಟಿಗೆ ಬರುವಂತೆ ಮಾಡಿ, ನನ್ನನ್ನು ಬಯ್ಯುವಂತೆ ಮಾಡಿ, ಕ್ಷೇತ್ರದಲ್ಲಿ ತಮ್ಮ ಮೇಲೆ ಸಿಂಪತಿ ಬರುವಂತೆ ಸನ್ನಿವೇಶ ಸೃಷ್ಟಿಸಿಕೊಳ್ಳುವುದರಲ್ಲಿ ಬಿ.ಆರ್​. ಯಾವಗಲ್​ ನಿಪುಣರು ಎಂದು ಸಿ.ಸಿ. ಪಾಟೀಲ ಆರೋಪಿಸಿದರು.

ಮುಖ್ಯಾಂಶಗಳು:

* ಕಾಂತರಾಜು ವರದಿ ಅವೈಜ್ಞಾನಿಕ. ಕಾಂಗ್ರೆಸ್​ ಶಾಸಕಾಂಗ ಸಭೆಯಲ್ಲಿ ಶಾಸಕರು ವರದಿ ಸ್ವೀಕೃತಿಗೆ ವಿರೋಧ ವ್ಯಕ್ತಪಡಿಸಬೇಕು.

* ವೀರಶೈವ ಲಿಂಗಾಯತ, ಒಕ್ಕಲಿಗ ನಾಯಕರ ವಿರೋಧ

* ಶಾಮನೂರು ಶಿವಶಂಕ್ರಪ್ಪ, ಡಿಕೆಶಿ ಅವರಿಂದಲೂ ವಿರೋಧ

* ಸಿ.ಟಿ. ರವಿ ಪ್ರಕರಣದಲ್ಲಿ ಡಿ.ಕೆ. ಶಿವಕುಮಾರ ಕೈವಾಡ

* ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸಲು ಹವಿಲ್ಲ ಸರ್ಕಾರದ ಬಳಿ ಗ್ಯಾರಂಟಿ ಸಮಿತಿ ಅಧ್ಯಕ್ಷರಿಗೆ ಸಾವಿರಾರು ರೂ. ಗೌರವಧನ ನೀಡಲು ಹಣವಿದೆ.

ಕೋಟ್​:

2ಎ ಮೀಸಲು ಸಂಬಂಧ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್​ ಮಾಡಿಸಿದ್ದ ಕಾಂಗ್ರೆಸ್​ ನಾಯಕರನ್ನು ಹರಿಹರ ಪಿಠದ ಶ್ರೀಗಳ ಹರ ಜಾತ್ರೆಗೆ ಆಹ್ವಾನಿಸಬಾರದಿತ್ತು. ವೈಯಕ್ತಿಕವಾಗಿ ಮತ್ತು ಪಂಚಮಸಾಲಿಗಳಿಗೆ ಈ ವಿಷಯ ನೋವು ತಂದಿದೆ.

- ಸಿ. ಸಿ. ಪಾಟೀಲ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net