ಲಿಂಗಾತಯರನ್ನು ಗುರಿಯಾಗಿಸಿ ನಡೆಸಿದ ಜಾತಿ ಗಣತಿ: ಸಿ.ಸಿ. ಪಾಟೀಲ ಆರೋಪ

Untitled
Published on

ಗದಗ: ಲಿಂಗಾಯತರನ್ನು ಗುರಿಯಾಗಿಸಿ ಸಿಎಂ ಸಿದ್ದರಾಮಯ್ಯ ಜಾತಿ ಗಣತಿ ಮಾಡಿಸಿದ್ದಾರೆ. ಇದಕ್ಕೆ ಲಿಂಗಾಯತ ಶಾಸಕ, ಸಚಿವರ ವಿರೋಧವಿದೆ. ನಾನೂ ಕೂಡ ಜಾತಿ ಗಣತಿ ವಿರೋಧಿಸುತ್ತೇನೆೆ ಎಂದು ಮಾಜಿ ಸಚಿವ, ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಗದಗ ನಗರದಲ್ಲಿ ಶುಕ್ರವಾರ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು ನಾಲ್ಕು ಗೋಡೆ ಮಧ್ಯೆ ಕುಳಿತು ನಡೆದ ಜನಗಣತಿ ಇದಾಗಿದೆ. ಲಿಂಗಾಯತರನ್ನು ಗುರಿಯಾಗಿಸಿ ದುರುದ್ದೇಶಪೂರ್ವಕವಾಗಿ ನಡೆದ ಜಾತಿಗಣತಿಯಾಗಿದೆ. ವೈಜ್ಞಾನಿಕವಾಗಿ ಜಾತಿಗಣತಿ ನಡೆಸಿದರೆ ಎಲ್ಲರ ಸಹಮತ ಇದೆ. ಇದು ಅವೈಜ್ಞಾನಿಕ ಜಾತಿ ಗಣತಿ. ಕಾಂಗ್ರೆಸ್​ ಶಾಸಕ ವಿನಯ ಕುಲಕಣಿರ್ ನೇತೃತ್ವದಲ್ಲಿ ಸಹಿ ಸಂಗ್ರಹ ಚಳುವಳಿ ಆರಂಭವಾಗಿದೆ. ನಾನೂ ಹಾಗೂ ಬಸನಗೌಡ ಪಾಟೀಲ ಯತ್ನಾಳ ಕೂಡ ಜಾತಿ ಗಣತಿ ವಿರೋಧಿಸಿ ಸಹಿ ಹಾಕಿದ್ದೇವೆ. ಹಿರಿಯ ಕಾಂಗ್ರೆಸ್​ ಮುಖಂಡ ಶಾಮನೂರು ಶಿವಶಂಕ್ರಪ್ಪ, ಅರವಿಂದ ಬೆಲ್ಲದ್​ ಸೇರಿದಂತೆ ಹಲವರು ಅವೈಜ್ಞಾನಿಕ ಜಾತಿಗಣತಿಗೆ ವಿರೊಧ ವ್ಯಕ್ತಪಡಿಸಿದ್ದಾರೆ ಎಂದು ಸಿ.ಸಿ. ಪಾಟೀಲ ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net