ನಿರೀಕ್ಷೆ ಹುಸಿಗೋಳಿಸಿದ ಬಜೆಟ್: ಸಿ.ಸಿ.ಪಾಟೀಲ

15GDG02B
Published on

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಎಲ್ಲರ ನಿರೀಕ್ಷೆಗಳನ್ನು ಹುಸಿಗೊಳಿಸಿದೆ. ಮುಖ್ಯವಾಗಿ ಸಿದ್ದರಾಮಯ್ಯನವರಿಗೆ ರಾಜಕೀಯ ಪುನರ್ ಜನ್ಮ ನೀಡಿದ ಉತ್ತರ ಕರ್ನಾಟಕವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಕೇಂದ್ರ ಸರ್ಕಾರದಿಂದ ಬರಬೇಕಾದ ಹಣದ ಕುರಿತು ತಪ್ಪು ಅಂಕಿ ಅಂಶಗಳನ್ನು ಬಜೆಟ್‌ನಲ್ಲಿ ಹೇಳುವ ಮೂಲಕ ಬಜೆಟ್‌ನ ಘನತೆ ಪಾವಿತ್ರö್ಯತೆಯನ್ನು, ಹಾಳು ಮಾಡಿದ್ದಾರೆಂದು ಮಾಜಿ ಸಚಿವರು ಹಾಗೂ ನರಗುಂದ ಶಾಸಕರಾದ ಸಿ.ಸಿ.ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯದ ಜನರಿಗೆ ಬರಬೇಕಾದ ೧೩ ಸಾವಿರ ಕೋಟಿ ಈಗಾಗಲೇ ಬಂದಿದೆ. ರಾಜ್ಯದ ಪಾಲಿಗೆ ತೆರಿಗೆ ಹಣದ ರೂಪವಾಗಿ ಬರಬೇಕಾಗಿದ್ದ ೨೭ ಸಾವಿರ ಕೋಟಿ ತೆರಿಗೆ ಹಣದ ಬದಲಾಗಿ ೩೦ ಸಾವಿರ ಕೋಟಿ ಈಗಾಗಲೇ ಬಂದಿದೆ. ೩ ಸಾವಿರ ಕೋಟಿ ಹೆಚ್ಚಿಗೆ ತೆರಿಗೆ ಹಣ ರಾಜ್ಯಕ್ಕೆ ಸಂದಾಯವಾಗಿದೆ. ತೆರಿಗೆ ವಸೂಲಿಯಲ್ಲಿ ತೀವ್ರ ಹಿನ್ನೆಡೆ ಮಾಡಿರುವ ಸರ್ಕಾರ ಬಂದಿರುವ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡಿಕೊಂಡು ಕರ್ನಾಟಕವನ್ನು ದಿವಾಳಿ ಅಂಚಿಗೆ ತಂದು ನಿಲ್ಲಿಸಿದ್ದಾರೆ.

ಈ ಹಿಂದಿನ ನಮ್ಮ ಸರ್ಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಾವುದೇ ರೀತಿಯ ಸಾಲ ಮಾಡದೇ ಉಳಿಕೆ ಬಜೆಟ್ ಮಂಡನೆ ಮಾಡಿದ್ದರು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ೧ ಲಕ್ಷ ಕೋಟಿ ಸಾಲ ಪಡೆದು, ೨೭ ಸಾವಿರ ಕೋಟಿ ಕೊರತೆ ಬಜೆಟ್ ಮಂಡನೆ ಮಾಡಿದ್ದು ಸರ್ಕಾರದ ದಿವಾಳಿತನವನ್ನು ತೋರಿಸುತ್ತದೆ. ಸಿದ್ದರಾಮಯ್ಯನವರ ರಾಜಕೀಯ ಜೀವನಕ್ಕೆ ಪುನರ್ ಜನ್ಮ ನೀಡಿದ ಉತ್ತರ ಕರ್ನಾಟಕದ ಬದಾಮಿ ಸೇರಿದಂತೆ ಎಲ್ಲಾ ಉತ್ತರ ಕರ್ನಾಟಕದ ಭಾಗವನ್ನು ಸಂಪೂರ್ಣವಾಗಿ ನಿರ್ಲಕ್ಷ ಮಾಡಿದ್ದು ಯಾವುದೇ ವಿಶೇಷ ಯೋಜನೆಗಳನ್ನು ನೀಡದೇ ನಿರ್ಲಕ್ಷ ಮಾಡಿದ್ದು. ಉತ್ತರ ಕರ್ನಾಟಕಕ್ಕೆ ಮಾಡಿದ ಬಹುದೊಡ್ಡ ಅನ್ಯಾಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net