

ಬೆಂಗಳೂರು: ನಗರ ವ್ಯಾಪ್ತಿಯ ಎಲ್ಲಾ ಹೋಟೆಲ್, ಬಾರ್ ಆ್ಯಂಡ್ ರೆಸ್ಟೋರೆಂಟ್ ಮತ್ತು ಅಂಗಡಿಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರ ಅಳವಡಿಸಿರಬೇಕು. ಸಿಸಿ ಕ್ಯಾಮರಾ ಅಳವಡಿಸದ ಮಾಲೀಕರಿಗೆ ದಂಡ ವಿಧಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ಎಚ್ಚರಿಕೆ ನೀಡಿದ್ದಾರೆ.
ಯಲಹಂಕ ಉಪನಗರದ ಡಾ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ಮಾಸಿಕ ಜನ ಸಂಪರ್ಕ ದಿವಸ ಸಭೆಯಲ್ಲಿ ಮಾತನಾಡಿದರು.
ಪಬ್ಲಿಕ್ ಸೇಫ್ಟಿ ಆ್ಯಕ್ಟೃ್ ಪ್ರಕಾರ ೧೦೦ಕ್ಕೂ ಹೆಚ್ಚು ಸಾರ್ವಜನಿಕರು ಬರುವ ಅಂಗಡಿಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರ ಅಳವಡಿಸಬೇಕು ಎಂದು ನಿಯಮವಿದೆ. ಹೀಗಾಗಿ ಮಾಲೀಕರಾದವರು ಸಾರ್ವಜನಿಕರು ಹಾಗೂ ತಮ್ಮ ಉದ್ಯೋಗಿಗಳ ಸುರಕ್ಷತೆಯ ಮತ್ತು ರಕ್ಷಣೆಯ ಕ್ರಮವನ್ನು ಕೈಗೊಳ್ಳಬೇಕು ಸಿಸಿ ಕ್ಯಾಮರಾಗಳನ್ನು ಅಳವಡಿಸುವ ವೇಳೆ ಪೊಲೀಸರ ಮಾರ್ಗದರ್ಶನದಲ್ಲಿ ಮೇರೆಗೆ ಅಳವಡಿಸಬೇಕು ಎಂದರು.
೫ ರಿಂದ ೧೦ ಸಾವಿರದವರೆಗೆ ದಂಡ:
ಇನ್‌ಸ್ಪೆಕ್ಟರ್‌ಗಳು ಸುರಕ್ಷತಾ ಕ್ರಮಗಳ ಬಗ್ಗೆ ಅಂಗಡಿ ಮಾಲೀಕರಿಗೆ ಸಲಹೆ ಸೂಚನೆ ನೀಡುತ್ತಾರೆ. ಇನ್‌ಸ್ಪೆಕ್ಟರ್‌ಗಳು ಪ್ರತಿ ಮೂರು ತಿಂಗಳಿಗೊಮ್ಮೆ ತಮ್ಮ ಠಾಣಾ ವ್ಯಾಪ್ತಿಯಲ್ಲಿರುವ ಅಂಗಡಿ ಮುಂಗಟ್ಟುಗಳಿಗೆ ಭೇಟಿ ಕೊಟ್ಟು ಸುರಕ್ಷತಾ ಕ್ರಮಗಳನ್ನು ಅಳವಡಿಸಿದ್ದಾರೆಯೇ ಎಂದು ಪರಿಶೀಲನೆ ನಡೆಸಬೇಕು. ಸಲಹೆ ಸೂಚನೆಗಳನ್ನು ನೀಡಬೇಕಾಗುತ್ತದೆ. ಒಂದು ವೇಳೆ ಇನ್‌ಸ್ಪೆಕ್ಟರ್‌ಗಳು ನೀಡಿದ ಸಲಹೆ ಸೂಚನೆಗಳನ್ನು ಪಾಲಿಸದಿದ್ದರೆ ಎಸಿಪಿ ದರ್ಜೆಯ ಅಧಿಕಾರಿಗಳು ದಂಡವನ್ನು ವಿಧಿಸಬಹುದು. ಈಗಾಗಲೇ ನಗರದ ಕೆಲವು ಕಡೆ ೫ ರಿಂದ ೧೦ ಸಾವಿರದವರೆಜಛಿ ದಂಡವನ್ನು ವಿಧಿಸಿದ್ದೇವೆ ಎಂದು ತಿಳಿಸಿದರು.
ರಸ್ತೆ ಸುತ್ತಮುತ್ತಲಿನ ಪ್ರದೇಶಗಳು ಕಾಣುವಂತೆ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು ಅವುಗಳು ಹೆಚ್ಚು ಕ್ವಾಲಿಟಿ ಮತ್ತು ಹೆಚ್ಚು ಸ್ಟೋರೇಜ್ ಇರಬೇಕು, ಕ್ಯಾಮರಾ ಯಾವ ಕಡೆ ಇರಬೇಕು, ನಿರ್ವಹಣೆ ಮಾಡುವುದರ ಬಗ್ಗೆ ಪೋಲೀಸರು ಸಲಹೆ ನೀಡುತ್ತಾರೆ. ಒಂದು ಸಿಸಿ ಕ್ಯಾಮರಾ, ಒಬ್ಬರು ಪೋಲೀಸ್ ರೀತಿ ಎಂದು ಅವರು ಹೇಳಿದರು.