ಸಿಸಿ ಕ್ಯಾಮರಾ ಒಡೆದು ಬ್ಯಾಂಕ್ ದರೋಡೆಗೆ ಯತ್ನ

Untitled design (1)
ಯಲಬುರ್ಗಾ ತಾಲೂಕಿನ ಬಂಡಿ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಕಳ್ಳತನಕ್ಕೆ ಯತ್ನಿಸಿದ ಖದೀಮರು ಬೀಗ ಒಡೆದು ಹಾಕಿರುವುದು.
Published on

ಯಲಬುರ್ಗಾ: ಬ್ಯಾಂಕ್ ದರೋಡೆಗೆ ಮುಂದಾದ ಕಳ್ಳರ ಪ್ರಯತ್ನ ವಿಫಲವಾದ ಘಟನೆ ತಾಲೂಕಿನ ಬಂಡಿ ಗ್ರಾಮದಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಖದೀಮರು ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಿಸಿ ಕ್ಯಾಮರಾ ಒಡೆದು, ಶೆಟರ್‌ನ ಬೀಗ ಮುರಿಯಲು ಯತ್ನಿಸಿದ್ದಾರೆ.


ಶುಕ್ರವಾರ ಬೆಳಗ್ಗೆ ವ್ಯವಸ್ಥಾಪಕಿ ವಿದ್ಯಾ ಬ್ಯಾಂಕ್‌ಗೆ ಬಂದಿದ್ದಾರೆ. ಬೀಗ ಮತ್ತು ಸಿಸಿ ಕ್ಯಾಮರಾ ಒಡೆದು ಬಿಸಾಕಿದ್ದರಿಂದ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಸಿಪಿಐ ಮೌನೇಶ್ವರ ಮಾಲಿಪಾಟೀಲ್, ಪಿಎಸ್‌ಐ ವಿಜಯಪ್ರತಾಪ ತಂಡ ಭೇಟಿ ನೀಡಿ ಪರಿಶೀಲಿಸಿತು. ಕೊಪ್ಪಳದಿಂದ ಶ್ವಾನದಳ ಕರೆಸಿ ಶೋಧ ನಡೆಸಿ, ಬೆರಳಚ್ಚು ತಜ್ಞರಿಂದ ಮಹಜರು ಮಾಡಿಸಲಾಯಿತು. ಪಕ್ಕದ ಜಮೀನೊಂದರಲ್ಲಿ ಕಳ್ಳರು ಮಧ್ಯಪಾನ ಮಾಡಿ, ಊಟ ಮಾಡಿ ತಟ್ಟೆ ಎಸೆದಿರುವುದನ್ನು ಶ್ವಾನದಳ ಪತ್ತೆ ಹಚ್ಚಿದೆ. ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net