ಸಿಬಿಎಸ್‌ಇ ದಕ್ಷಿಣ ವಲಯ ಹಾಕಿ ಪಂದ್ಯಾಟಕ್ಕೆ ಚಾಲನೆ

kodagu vidhyalaya hocky
Published on

ಮಡಿಕೇರಿ: ಕೊಡಗು ವಿದ್ಯಾಲಯದಲ್ಲಿ ನಡೆದ ಸಿಬಿಎಸ್‌ಇ ದಕ್ಷಿಣ ವಲಯ ಹಾಕಿ ಟೂರ್ನಮೆಂಟ್ ಉದ್ಘಾಟನಾ ಸಮಾರಂಭಕ್ಕೆ ಶುಕ್ರವಾರ ಅದ್ಧೂರಿಯಾಗಿ ಚಾಲನೆ ನೀಡಲಾಯಿತು.


೨೨ ಶಾಲೆಗಳ ೩೬ ತಂಡದ ೭೦೦ ಆಟಗಾರರನ್ನು ಆರತಿಯೊಂದಿಗೆ ಹಣೆಗೆ ತಿಲಕವನ್ನು ಇಟ್ಟು ಕೊಡವ ವಾಲಗದ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಈ ಕಾರ್ಯಕ್ರಮಕ್ಕೆ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ.ಪುಷ್ಪ ಕುಟ್ಟಣ್ಣ, ಸಿಬಿಎಸ್‌ಇ ಪರಿವೀಕ್ಷಕ ಅಫ್ಸರ್ ಅಹಮಾದ್ ಮತ್ತು ಶಾಲಾ ಕ್ರೀಡಾಧ್ಯಕ್ಷ ರಘು ಮಾದಪ್ಪ ಅವರನ್ನು ಶಾಲಾ ವಾದ್ಯದೊಂದಿಗೆ ಶಾಲಾ ಪ್ರಾಂಶುಪಾಲರು, ಆಡಳಿತಧಿಕಾರಿಗಳು ಮತ್ತು ಕ್ರೀಡಾ ಹಾಗೂ ದೈಹಿಕ ಶಿಕ್ಷಕರು ಸ್ವಾಗತಿಸಿದರು.


ಸಿಬಿಎಸ್‌ಇ ಕ್ರೀಡಾ ಧ್ವಜಾರೋಹಣವನ್ನು ಮುಖ್ಯ ಅತಿಥಿಗಳು ನೆರವೇರಿಸುವುದರ ಮುಖಾಂತರ ಕಾರ್ಯಕ್ರಮ ಆರಂಭವಾಯಿತು. ನಂತರ ಸ್ಪರ್ಧೆಯಲ್ಲಿ ಭಾಗವಹಿಸಿದ ಆಟಗಾರರ ಪಥಸಂಚಲನವು ಶಿಸ್ತಿನ ಮತ್ತು ಏಕತೆಯ ಪ್ರತೀಕವಾಗಿ ಜನರ ಮನಸೆಳೆಯಿತು. ಪರ್ಲಿನ್ ಪೊನ್ನಮ್ಮ ಓಲಿಂಪಿಕ್ ಜ್ಯೋತಿಯನ್ನು ಬೆಳಗಿಸಿದರು.


ಶಾಲಾ ಪ್ರಾಂಶುಪಾಲೆ ಕೆ.ಎಸ್.ಸುಮಿತ್ರಾ, ಕ್ರೀಡೆಯ ಮಹತ್ವ ಮತ್ತು ಯುವ ಆಟಗಾರರ ತಂಡದ ಕೆಲಸದ ಅಗತ್ಯವನ್ನು ವಿವರಿಸಿದರು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ.ಪುಷ್ಪ ಕುಟ್ಟಣ್ಣ ಮಾತನಾಡಿ, ಕೊಡಗು ವಿದ್ಯಾಲಯ ಶಾಲೆ ಇಂತಹ ಬೃಹತ್ ಮಟ್ಟದ ಕಾರ್ಯಕ್ರಮ ಆಯೋಜಿಸಿರುವುದು ನಮ್ಮ ಕೊಡಗಿಗೆ ಒಂದು ಹೆಮ್ಮೆಯ ವಿಷಯ. ಕ್ರೀಡೆಗೆ ಇಂತಹ ಪ್ರೋತ್ಸಾಹ ಅಗತ್ಯೆ ಎಂದರು.


ಭಾರತ ಕ್ರೀಡಾ ಪ್ರಾಧಿಕಾರ(ಸಾಯಿ) ಮಡಿಕೇರಿ ಮತ್ತು ಕೊಡಗು ವಿದ್ಯಾಲಯದ ಹಳೆ ವಿದ್ಯಾರ್ಥಿಗಳ ನಡುವಿನ ಪ್ರದರ್ಶನ ಪಂದ್ಯದಲ್ಲಿ ಹಳೆ ವಿದ್ಯಾರ್ಥಿ ತಂಡ ಜಯಶಾಲಿಯಾಗಿ ಹೊರಹೊಮ್ಮಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net