

ರಾಯಚೂರು ತಾಲೂಕಿನ ಸುಂಕನೂರು ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಅಲ್ಪಸಂಖ್ಯಾತರ ಎಪಿಜಿ ಡಾ.ಅಬ್ದುಲ್ ಕಲಾಂ ಸಿಬಿಎಸ್ಸಿ ರೆಸಿಡೆನ್ಸಿಯಲ್ ಶಾಲೆಯ ಕಾಮಗಾರಿ ಸ್ಥಳಕ್ಕೆ ಸಂಸದ ಜಿ.ಕುಮಾರ ನಾಯಕ ಭಾನುವಾರ ಭೇಟಿ ನೀಡಿ, ಪರಿಶೀಲನೆ ಮಾಡಿದರು.
ಕರ್ನಾಟಕ ಹೌಸಿಂಗ್ ಬೋರ್ಡ್ ವತಿಯಿಂದ ಸುಮಾರು 28 ಕೋಟಿ ರೂ. ಅನುದಾನದಲ್ಲಿ ನಿರ್ಮಾಣವಾಗುತ್ತಿದ್ದು, ಮೊದಲ ಹಂತ ಹಾಗೂ 21 ಕೋಟಿ ಎರಡನೇ ಹಂತದಲ್ಲಿ 7 ಕೋಟಿ ಸೇರಿ ಒಟ್ಟು 28 ಕೋಟಿಯ ರೂಪಾಯಿ ಮೊತ್ತದ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಶಾಲೆ ಕಟ್ಟಡ ಕಾಮಗಾರಿಯನ್ನು ವೀಕ್ಷಿಸಿ,
ಸಂಬಂಧಪಟ್ಟ ಅಧಿಕಾರಿಗಳಿಗೆ ಕಾಮಗಾರಿಯು ಆದಷ್ಟು ಬೇಗನೆ ಪೂರ್ಣಗೊಳ್ಳಿಸಿ ಹಾಗೂ ಗುಣಮಟ್ಟದಿಂದ ನಿರ್ಮಾಣ ಮಾಡಿ ಎಂದು ಅಧಿಕಾರಿಗೆ ಸೂಚಿಸಿದರು. 2022ಕ್ಕೆ ಮುಗಿಬೇಕಾದಂತಹ ಕಾಮಗಾರಿಯು 2025 ಆದರೆ ಮುಗಿಯದಿದ್ದಕ್ಕೆ ಸಂಸದರು ಅಧಿಕಾರಿಗಳ ಮೇಲೆ ಗರಂ ಆದರೂ ಕೂಡಲೇ ಸ್ಥಳದಲ್ಲಿದ್ದಂತ ಸಣ್ಣಪುಟ್ಟ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ದೂರವಾಣಿ ಮೂಲಕ ಜಿಲ್ಲಾಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮೊಹಮ್ಮದ್ ಶಾಲಂ, ಜಯಣ್ಣ, ಜಯಂತ್ ರಾವ್ ಪತಂಗಿ, ರಜಾಕ್ ಉಸ್ತಾದ್, ಬಿ. ರಮೇಸ್, ಮಾಡಗಿರಿ ನರಸಿಂಹಲು, ಅಲ್ಪಸಂಖ್ಯಾತರ ಇಲಾಖೆಯ ಉಪನಿರ್ದೇಶಕ ಪ್ರವೀಣ್ ಕುಮಾರ್, ಕರ್ನಾಟಕ ಹೌಸಿಂಗ್ ಬೋರ್ಡ್‌ನ ಸಿಬ್ಬಂದಿಗಳು ಇದ್ದರು.