

ಶಿವಮೊಗ್ಗ: ಡಿಸಿಎಂ ಡಿ.ಕೆ.ಶಿವಕುಮಾರ್ ಮೇಲಿನ ಕೇಸ್ ಹಿಂಪಡೆಯುತ್ತಿರುವ ಬಗ್ಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರು ತಿಹಾರ್ ಜೈಲಿಗೆ ಹೋಗುವುದು ಬಾಕಿ ಇದೆ. ಸಿಬಿಐ ಎಂದಾಕ್ಷಣ ಕಳ್ಳರ ಗುಂಪಿಗೆ ಭಯ ಹೆಚ್ಚಾಗುತ್ತಿದೆ. ಹಾಗಾಗಿಯೇ ಡಿಕೆಶಿ ಮೇಲಿನ ಕೇಸ್ ಹಿಂಪಡೆಯಲು ಸರ್ಕಾರ ತೆರೆಮರೆಯಲ್ಲಿ ತೀವ್ರ ಕಸರತ್ತು ನಡೆಯತ್ತಿದೆ ಎಂದು ದೂರಿದರು.
ಸಿಎಂ ಸಿದ್ದರಾಮಯ್ಯ ಅವರ ಕುರುಬರು, ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಒಕ್ಕಲಿಗರು ಮತ್ತು ಶಾಸಕ ಶಾಮನೂರು ಶಿವಶಂಕರಪ್ಪ ನೇತತ್ವದ ವೀರಶೈವ ಲಿಂಗಾಯತರೆಂಬ ಮೂರು ಬಣಗಳು ಕಾಂಗ್ರೆಸ್‌ನಲ್ಲಿವೆ. ಹಾಗಾಗಿ ಕಾಂಗ್ರೆಸ್ ಮೂರು ಭಾಗವಾಗಿದೆ ಎಂದರು.