ಸಿಬಿಐ ಪೊಲೀಸರ ಹೆಸರಿನಲ್ಲಿ ಹಿರಿಯ ವೈದ್ಯನಿಗೆ 3.71 ಕೋಟಿ ರೂ. ಮೋಸ

Cibra
Published on

ರಾಣೆಬೆನ್ನೂರ: ಸಿಬಿಪಿ ಪೊಲೀಸರ ಎಂದು ಹೇಳಿಕೊಂಡು ಖಾತೆಯ ಹಣ ಪರಿಶೀಲಿಸುವ ನೆಪದಲ್ಲಿ ನಗರದ ವೈದ್ಯರೊಬ್ಬರ ಖಾತೆಯಿಂದ ಬರೋಬ್ಬರಿ 3.71 ಕೋಟಿ ರೂ. ಆರ್‌ಟಿಜಿಎಸ್ ಮೂಲಕ ವರ್ಗಾಯಿಸಿಕೊಂಡು ಮೋಸ ಮಾಡಿದ ಘಟನೆ ಕುರಿತು ಹಾವೇರಿ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಸ್ಟೇಷನ್ ರಸ್ತೆಯ ಸಂಜೀವಿನಿ ನರ್ಸಿಂಗ್ ಹೋಮ್‌ನ ಡಾ. ಭೀಮಸೇನ ಶ್ರೀನಿವಾಸ ಕರ್ಜಗಿ (83) ಮೋಸ ಹೋದವರು.
ಇವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಫೋನ್ ಮಾಡಿ ‘ನಾವು ಸಿಬಿಐ ಮುಂಬೈ ಇನ್‌ಸ್ಪೇಕ್ಟರ್ ದಿಕ್ಷಿತ್ ಗಡಾದ ಅಂತಾ ಮಾತನಾಡುತ್ತಿದ್ದೇನೆ. ನರೇಶ ಗೊಯಲ್ ಎನ್ನುವ ವ್ಯಕ್ತಿ ಮುಂಬೈ ವ್ಯಕ್ತಿಯೊಬ್ಬನ ಮೇಲೆ ಬ್ಯಾಂಕ್ ಚೀಟಿಂಗ್ ಮತ್ತು ಮನಿ ಲ್ಯಾಂಡರ್ ಕಾಯ್ದೆ ಅಡಿ ಕೇಸ್ ದಾಖಲಿಸಿದ್ದಾನೆ. ಅವನು ಮುಂಬೈನ ಕೆನರಾ ಬ್ಯಾಂಕ್‌ನ ಭೀಮಸೇನ ಕರ್ಜಗಿ ಹೆಸರಿನಿಂದ ಹಣ ತೆಗೆದಿದ್ದಾನೆ. ನೀವು ಯಾವಾಗ ಇಲ್ಲಿ ಖಾತೆ ತೆಗೆದಿದ್ದೀರಿ ಹೇಳಿ’ ಎಂದು ಡಾ. ಭೀಮಸೇನ ಅವರಿಗೆ ಬೆದರಿಸಿದ್ದಾನೆ.
ಅಲ್ಲದೆ ಅವರ 10 ಬ್ಯಾಂಕ್ ಖಾತೆಗಳ ಮಾಹಿತಿ ಪಡೆದಿದ್ದಾನೆ. ನಂತರ ಖಾತೆಗಳ ವೆರಿಫೀಕೆಷನ್ ಮಾಡಬೇಕು ಎಂದು ಹೇಳಿ ಎಲ್ಲ ಖಾತೆಯಿಂದ ಒಟ್ಟು 3.71 ಕೋಟಿ ರೂ. ಹಣವನ್ನು ಆರ್‌ಟಿಜಿಎಸ್ ಮೂಲಕ ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ್ದಾನೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net