

ಧಾರವಾಡ: ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಲ್ಲಿ ಕೇಳಿಬಂದ ಹಣಕಾಸು ದುರ್ಬಳಕೆ ಪ್ರಕರಣದ ತನಿಖೆಯನ್ನು ಸಿಬಿಐ ತಂಡ ಚುರುಕುಗೊಳಿಸಿದೆ. ಗೋವಾದ ವ್ಯಾಪ್ತಿಯನ್ನೂ ಹೊಂದಿರುವ ಧಾರವಾಡ ಪ್ರಾಂತ ಕಚೇರಿಗೆ ಶನಿವಾರ ಆಗಮಿಸಿದ್ದ ಸಿಬಿಐ ಅಽಕಾರಿಗಳ ತಂಡ ೫೦ಕ್ಕೂ ಹೆಚ್ಚು ಸಿಬ್ಬಂದಿಯ ವಿಚಾರಣೆ ನಡೆಸಿತು.
೨೦೦೪ರಿಂದ ೨೦೨೦ರವರೆಗಿನ ಆಡಳಿತ ಮಂಡಳಿಯ ಅವಽಯಲ್ಲಿ ಆಡಿಟ್ ಮತ್ತು ಅಕೌಂಟ್ ವಿವರದಲ್ಲಿ ವ್ಯತ್ಯಾಸ ಕಂಡುಬAದಿತ್ತು. ಅಲ್ಲದೆ, ಕೇಂದ್ರ ಸರ್ಕಾರದ ೨೨ ಕೋಟಿ ರೂಪಾಯಿಗೂ ಹೆಚ್ಚು ಹಣ ದುರ್ಬಳಕೆ ಮÁಡಿಕೊಂಡ ಆರೋಪ ಕೇಳಿಬಂದಿತ್ತು. ಕೇಂದ್ರ ಸರ್ಕಾರ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿತ್ತು.
ಹಿಂದಿ ಪ್ರಸಾರ ಮತ್ತು ಪ್ರಚಾರಕ್ಕಾಗಿ ಕೇಂದ್ರ ಸರ್ಕಾರ ನೀಡಿದ್ದ ಅನುದಾನದ ಮೂಲ ಉದ್ದೇಶ ಬಿಟ್ಟು ದುರ್ಬಳಕೆ ಮಾಡಿಕೊಂಡು ಆರೋಪ ಕೇಳಿತ್ತು. ಅಲ್ಲದೆ, ಕೆಲ ಶಿಕ್ಷಕರು ತಮ್ಮ ಸ್ವಂತ ಅಕೌಂಟ್‌ಗೆ ಹಣ ಹಾಕಿಕೊಂಡ ಬಗ್ಗೆಯೂ ದಾಖಲೆಗಳು ಸಿಕ್ಕಿವೆ ಎನ್ನಲಾಗಿದೆ. ಕೆಲ ನಿವೃತ್ತರನ್ನೂ ಕರೆಯಿಸಿ ವಿಚಾರಣೆಗೊಳಪಡಿಸಲಾಗಿದೆ.
ಈ ಕುರಿತು ಕರ್ನಾಟಕ ಪ್ರಾಂತದ ಅಧ್ಯಕ್ಷ ಈರೇಶ ಅಂಚಟಗೇರಿ ಮಾತನಾಡಿ, ಸಿಬಿಐ ತನಿಖೆ ನಡೆಯುತ್ತಿದ್ದು, ಅಽಕಾರಿಗಳು ಕೇಳಿದ ಮಾಹಿತಿ, ಫೈಲ್‌ಗಳನ್ನು ಕೊಡುತ್ತಿದ್ದೇವೆ. ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದೇವೆ. ತನಿಖೆ ಪೂರ್ಣಗೊಂಡ ಬಳಿಕ ಸತ್ಯಾಸತ್ಯತೆ ಹೊರಬೀಳಲಿದೆ ಎಂದರು.