ಅಂತರ್ ಕಾಲೇಜು ಫೆಸ್ಟ್ ಗೆ ಚಾಲನೆ, ಜೈನ್ ಕಾಲೇಜಿನಿಂದ ಕ್ಯಾವಲ್ ಕೇಡ್-24 ಆಯೋಜನೆ

IMG_20240621_202957_605.jpg
Published on

ಹುಬ್ಬಳ್ಳಿ: ಇಲ್ಲಿಯ ಜೈನ್ ಕಾಲೇಜು ವತಿಯಿಂದ ನಗರದಲ್ಲಿ ಏರ್ಪಡಿಸಲಾಗಿರುವ ಎರಡು ದಿನಗಳ ಕ್ಯಾವಲ್ ಕೇಡ 24 ಅಂತರ್ ಕಾಲೇಜು ಫೆಸ್ಟ್ ಗೆ ಶುಕ್ರವಾರ ಚಾಲನೆ ನೀಡಲಾಯಿತು.

ಸೇವಕರಾಮ ರಿಯಾಲ್ಟಿ ಸಂಸ್ಥಾಪಕ ಸದಸ್ಯ ಕರಣ ಅಗರವಾಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹುಬ್ಬಳ್ಳಿ ಮಾತ್ರವಲ್ಲ ಬೆಳಗಾವಿ, ಬಳ್ಳಾರಿ ಮುಂತಾದೆಡೆಯಿಂದ ಆಗಮಿಸಿದ್ದ ವಿದ್ಯಾರ್ಥಿ ಸಮೂಹ ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಬೇಕೆಂದು ಹುರಿದುಂಬಿಸಿದರು.

ಜೈನ್ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಪ್ರಾಚಾರ್ಯ ಡಾ. ಪ್ರಶಾಂತ ಬಣಕಾರ ಮಾತನಾಡಿ, ಸ್ಪರ್ಧಾ ಮನೋಭಾವದಿಂದ ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು. ಇದರಿಂದ ಹೆಚ್ಚಿನ ಆಟಗಳಲ್ಲಿ ಗೆಲ್ಲುವ ಅವಕಾಶ ಇರುತ್ತದೆ ಎಂದು ಹೇಳಿದರು.

ಜೈನ್ ಕಾಲೇಜ್ ಪ್ರಾಚಾರ್ಯ ಪ್ರೊ. ಮಾಯಾ ಕುಲ್ಹಳ್ಳಿ ಮಾತನಾಡಿದರು. ಪ್ರೊ. ತನುಜಾ, ತುಷಾರ ಅಗರವಾಲ್, ಮಹ್ಮದ ಯುನೂಸ್ ಮುಲ್ಲಾ, ಇತರರು ಇದ್ದರು.

ವಿವಿಧ ಕಾಲೇಜುಗಳಿಂದ 120ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.

ಬಿಕಾಂ ವಿಭಾಗದಲ್ಲಿ ಬೆಸ್ಟ್ ಮ್ಯಾನೇಜರ್, ಕ್ವಿಜ್, ಫೈನಾನ್ಸ್, ಮಾರ್ಕೆಟಿಂಗ್, ಬಿಬಿಎ ವಿಭಾಗದಲ್ಲಿ ಬೆಸ್ಟ್ ಮ್ಯಾನೇಜರ್, ಸ್ಟ್ರಾಟಜಿಕ್ ಪ್ಲಾನಿಂಗ್, ಫೈನಾನ್ಸ್, ಕೆಸಿಸ್ ಮ್ಯಾನೇಜಮೆಂಟ್ ಮುಂತಾದ ಸ್ಪರ್ಧೆಗಳು ನಡೆದವು.

ಜೂನ್ 22ರಂದು ಅಮರಗೋಳ ಬಳಿಯ ರಾಯಲ್ ರಿಟ್ಜ ಹೋಟೆಲ್ನಲ್ಲಿ ಸೆಮಿಫೈನಲ್ ಹಾಗೂ ಫೈನಲ್ ರೌಂಡ್‌ ಸ್ಪರ್ಧೆಗಳು ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net