ಕಾವೇರಿ ನೀರು ಕಲುಷಿತಗೊಂಡಿಲ್ಲ

28spt2
Published on

ಸೋಮವಾರಪೇಟೆ: ಕೊಡಗಿನ ನಾವೆಲ್ಲರೂ ಕಾವೇರಿ ನೀರನ್ನು ಕುಡಿಯುತ್ತಿದ್ದು, ಈ ನೀರು ಅಷ್ಟಾಗಿ ಕಲುಷಿತಗೊಂಡಿಲ್ಲ ಎಂದು ನಗರೂರು ನಿವಾಸಿ ಗ್ಲೆನಿಟಾ ಡಿಸೋಜ ಹೇಳಿದರು.

ಒಕ್ಕಲಿಗರ ಸಮುದಾಯಭವನದ ಶ್ರೀಗಂಧಹಾಲ್‌ನಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ನ್ಯಾನೊ ತಂತ್ರಜ್ಞಾನದಲ್ಲಿ ಪಿಎಚ್.ಡಿ ಪದವಿ ಪಡೆದಿರುವ ಪಟ್ಟಣದ ನಗರೂರು ನಿವಾಸಿ ಗ್ಲೆನಿಟಾ ಡಿಸೋಜ ಅವರನ್ನು ತಾಲೂಕು ರಾಷ್ಟ್ರೀಯ ಹಬ್ಬಗಳ ಸಮಿತಿಯಿಂದ ಗುರುವಾರ ಮಾಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.


ಕುಡಿಯುವ ನೀರಿನ ಬಗ್ಗೆ ಸಂಶೋಧನೆಯ ಬಗ್ಗೆ ಪಿಎಚ್ಡಿ ಮಾಡಿದ್ದೇನೆ. ನೀರನ್ನು ಕಾಯಿಸಿ ಕುಡಿದರೆ ಸಾಕು ಸಮಸ್ಯೆ ಇರುವುದಿಲ್ಲ. ಆದರೆ, ನಗರಪ್ರದೇಶದಲ್ಲಿ ನೀರು ಬಹಳಷ್ಟು ಕಲುಷಿತಗೊಂಡಿದೆ. ವೈಜ್ಞಾನಿಕವಾಗಿ ಶುದ್ಧೀಕರಿಸದೆ ನೀರನ್ನು ಉಪಯೋಗಿಸಲು ಸಾಧ್ಯವಿಲ್ಲ. ದೇಶದಲ್ಲಿ ಕೈಗಾರಿಕೆಗಳಿಂದ ಅತಿ ಹೆಚ್ಚು ನೀರು ಮಲೀನವಾಗಿದೆ. ಈ ಬಗ್ಗೆ ಸರ್ಕಾರ ಹೆಚ್ಚಿನ ಕ್ರಮ ಜರುಗಿಸಬೇಕು ಎಂದು ಹೇಳಿದರು.

ತಹಸೀಲ್ದಾರ್ ನವೀನ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಸೋಮವಾರಪೇಟೆ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ, ಬಿಇಒ ಭಾಗ್ಯಮ್ಮ, ಪ್ರಮುಖರಾದ ತಿಲೋತ್ತಮೆ, ನಂದಕುಮಾರ್, ಎಂ.ಬಿ.ಅಭಿಮನ್ಯು ಕುಮಾರ್, ಶೀಲಾ ಡಿಸೋಜ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net