

ಮಂಡ್ಯ: ಮಳೆ ಕೊರತೆ, ಬರದಿಂದ ತತ್ತರಿಸಿರುವ ಕಾವೇರಿ ಪ್ರಾಂತ್ಯದಲ್ಲಿ ಬೆಳೆ ರಕ್ಷಣೆಗೆ ಸರ್ಕಾರ ಮುಂದಾಗಿದೆಯಾದರೂ ಇನ್ನಷ್ಟು ದಿನ ನಾಲೆಗಳಲ್ಲಿ ನೀರು ಹರಿಸುವ ಮೂಲಕ ಜನ-ಜಾನುವಾರು ಮತ್ತು ಕಬ್ಬಿನ ರಕ್ಷಣೆಗೆ ಮುಂದಾಗಬೇಕು ಎಂದು ರೈತ ಪರ್ವ ಸಂಘದ ಅಧ್ಯಕ್ಷ ಅರುಣ್‌ಕುಮಾರ್ ಒತ್ತಾಯಿಸಿದರು.
ಅನಾವೃಷ್ಠಿಯಿಂದ ಕಂಗಾಲಾಗಿದ್ದ ಜನರ ಸಂಕಷ್ಟವನ್ನು ದೂರ ಮಾಡಿದ್ದು, ಮಾತು ಕೊಟ್ಟಂತೆ ಹೆಚ್ಚುವರಿಯಾಗಿ ನೀರು ಹರಿಸಲಾಗಿದೆ. ಹಬ್ಬ ಹರಿದಿನಗಳಲ್ಲಿ ಜನ-ಜಾನುವಾರುಗಳ ಉಪಯೋಗಕ್ಕಾಗಿ ನಾಲೆಗಳಲ್ಲಿ ನೀರು ಹರಿಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ತಮಿಳುನಾಡಿನಲ್ಲಿ ಮಳೆ ಆಗುತ್ತಿದೆ ಇನ್ನುಮುಂದೆ ನೀರು ಹರಿಸುವ ಪ್ರಮೇಯವಿಲ್ಲ. ಆದರೂ ಕಾವೇರಿ ನದಿ ನೀರಿನ ಶಾಶ್ವತ ಪರಿಹಾರಕ್ಕೆ ಹಾಗೂ ಸಂಕಷ್ಟ ಸೂತ್ರಕ್ಕೆ ಎಲ್ಲರೂ ಹೊಂದಾಗಿ ಮಹತ್ವದ ತೀರ್ಮಾನ ತೆಗೆದುಕೊಂಡು ಒತ್ತಾಯಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು. ಎರಡು ರಾಜ್ಯದ ನೀರಿನ ಸಮಸ್ಯೆ ಬಗೆಹರಿಸಿಕೊಡಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡ ಹೆಮ್ಮಿಗೆ ಚಂದ್ರಶೇಖರ್, ಎಚ್.ಡಿ.ಜಯರಾಂ, ಮಂಗಲ ಯೋಗೇಶ್, ಎಸ್.ವೆಂಕಟೇಶ್ ಇದ್ದರು.