ಗೋಣಿಕೊಪ್ಪ: ಕಾವೇರಿ ಅಮ್ಮ ಕೊಡವ ಮಹಿಳಾ ಸಂಘದ ವತಿಯಿಂದ ಅಮ್ಮ ಕೊಡವ ಸಭಾಂಗಣದಲ್ಲಿ ಕಾವೇರಿ ತೀರ್ಥಪೂಜೆ ಮಂಗಳವಾರ ನಡೆಯಿತು.
ಕಾವೇರಿಗೆ ಬಳೆ ತೊಡಿಸಿ ಗೌರವ ಸೂಚಿಸಲಾಯಿತು. ಕಾವೇರಿ ಹಾಡಿನ ಮೂಲಕ ಭಕ್ತಿ ಮೂಡಿಸಲಾಯಿತು. ಸಾಂಪ್ರದಾಯಿಕ ಸೀರೆತೊಟ್ಟು ಮಹಿಳೆಯರು ಭಾಗವಹಿಸಿದ್ದರು. ಅತಿಥಿಯಾಗಿ ಹಿರಿಯರಾದ ಡಾ. ಹೆಮ್ಮಚ್ಚಿಮನೆ ಸರಸ್ವತಿ ಸೋಮೇಶ್ ಪಾಲ್ಗೊಂಡು ಸಂಘಟನೆಗೆ ಒತ್ತು ನೀಡುವಂತೆ ಸಲಹೆ ನೀಡಿದರು.
ಕಾರ್ಯದರ್ಶಿ ಅಶ್ವಿನಿ ನಂದಾ ವರದಿ ವಾಚಿಸಿದರು. ಸಂಘದ ಅಧ್ಯಕ್ಷೆ ಅಮ್ಮತ್ತಿರ ರೇವತಿ ಪರಮೇಶ್ವರ್, ಹಿರಿಯರಾದ ಅಮ್ಮತ್ತಿರ ಯಮುನಾ ಕೃಷ್ಣಕುಮಾರ್ ಇದ್ದರು.