ಮುಂದುವರೆದ ಕಾವೇರಿ ಹೋರಾಟ: ರಾಜ್ಯಸರ್ಕಾರದ ವಿರುದ್ಧ ಆಕ್ರೋಶ

Cauvery protest mandya
Published on

ಮಂಡ್ಯ: ತಮಿಳುನಾಡು ಪರ ಆದೇಶ ನೀಡುತ್ತಿರುವ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಹಾಗೂ ರೈತರ ಹಿತ ಕಡೆಗಣಿಸಿದ ರಾಜ್ಯಸರ್ಕಾರದ ವಿರುದ್ಧ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಗರದ ಸರ್‌ಎಂವಿ ಪ್ರತಿಮೆ ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟ ಮಂಗಳವಾರ 141ನೇ ದಿನ ಪೂರೈಸಿತು.

ಕಾವೇರಿ ನಿಯಂತ್ರಣ ಮಂಡಳಿ ಮತ್ತೆ ಮತ್ತೆ ತ.ನಾಡಿಗೆ ನೀರು ಹರಿಸುವಂತೆ ಆದೇಶ ನೀಡುತ್ತಿರುವ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. ರಾಜ್ಯಕ್ಕೆ ನಿರಂತರ ಅನ್ಯಾಯವಾಗುತ್ತಿದ್ದರೂ ರಾಜ್ಯ ಸರ್ಕಾರ, ಸಂಸದರು ದನಿ ಎತ್ತದಿರುವ ಹಿನ್ನೆಲೆಯಲ್ಲಿ ಅವರ ಬಿತ್ತಿ ಪತ್ರ ಅಂಟಿಸಲಾಯಿತು.

ಧರಣಿಯಲ್ಲಿ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ, ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಎಸ್.ನಾರಾಯಣ್, ಕಿರಂಗೂರು ಪಾಪು, ಮರಿಸ್ವಾಮಣ್ಣ, ಇಂಡುವಾಳು ಬಸವರಾಜು, ರಾಮಲಿಂಗು, ಸುಜಾತಾ ಸಿದ್ದಯ್ಯ, ಸವಿತಾ, ಸುಶೀಲಮ್ಮ, ತಾಯಮ್ಮ, ಜವರಪ್ಪ, ಸ್ವಾಮಿ, ರವಿ, ದೇವಿರಮ್ಮ, ಜಯಸ್ವಾಮಿ, ಮಲ್ಲೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net