ಕಾವೇರಿ ನೀರಿನ ಮೇಲೆ ಸಿಎಂ ಸಿದ್ದರಾಮಯ್ಯ, ಸ್ಟಾಲಿನ್ ವಕ್ರದೃಷ್ಠಿ: ಬೂದಗುಂಬಳ ಹೊಡೆದು ಪೂಜೆ ಸಲ್ಲಿಸಿದ ಬಿಜೆಪಿ ಕಾರ್ಯಕರ್ತರು

Cauvery protest by BJP workers mandya
Published on

ಮಂಡ್ಯ: ಕಾವೇರಿ ನೀರಿನ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಮಿಳುನಾಡು ನಾಡು ಸಿಎಂ ಸ್ಟಾಲಿನ್ ವಕ್ರದೃಷ್ಠಿ ಹಾಕಿದ್ದಾರೆಂದು ಶುಕ್ರವಾರ ಬಿಜೆಪಿ ಕಾರ್ಯಕರ್ತರು ವಿಭಿನ್ನವಾಗಿ ಪ್ರತಿಭಟಿಸಿದರು.

ನಗರದ ಕಾವೇರಿ ಭವನದ ಎದುರು ಕಾವೇರಿ ಮಾತೆ ಪ್ರತಿಮೆಗೆ ಪೂಜೆ ಸಲ್ಲಿಸಿ ಬೂದುಗುಂಬಳ ಇಳಿ ತೆಗೆದು ಹೊಡೆಯುವ ಮೂಲಕ ಹಾಗೂ ಮುಂದೆ ಯಾರ ದೃಷ್ಟಿಯೂ ಬೀಳದಿರಲೆಂದು ಪ್ರಾರ್ಥಿಸಿದರು. ಐ.ಎನ್.ಡಿ.ಐ.ಎ ಮೈತ್ರಿ ಕೂಟ ಉಳಿಸಿಕೊಳ್ಳಲು ಇಬ್ಬರು ಸಿಎಂ ಸೇರಿ ಕಾವೇರಿ ನೀರಿನ ಮೇಲೆ ವಕ್ರದೃಷ್ಠಿ ನೆಟ್ಟಿದ್ದಾರೆಂದು ಟೀಕಿಸಿದರು.

ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಹೊಸಹಳ್ಳಿ ಶಿವು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net