ಕಾವೇರಿ ವಿವಾದ; ರಾಜ್ಯದ ಹಿತ ಕಾಯಲು ಬದ್ಧ ಎಂದ ಯು.ಟಿ. ಖಾದರ್

ut khader
Published on

ಮೈಸೂರು: ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ನ್ಯಾಯಾಲಯದ ತೀರ್ಪಿನ ಕುರಿತು ನಾನು ಪ್ರತಿಕ್ರಿಯಿಸಲು ಬಯಸುವುದಿಲ್ಲ. ಆದರೆ, ಕಾವೇರಿ ವಿಚಾರದಲ್ಲಿ ರಾಜ್ಯದ ಹಿತ ಕಾಯಲು ಕಾನೂನು ಬದ್ಧವಾದ ಹೋರಾಟ ಮಾಡಲು ವಿಧಾನಸಭೆ ಒಗ್ಗಟ್ಟಿನಿಂದ ಇದೆ ಎಂದು ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್ ಹೇಳಿದರು.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಂತಹ ಸಂದರ್ಭದಲ್ಲಿ ಎಲ್ಲರು ಒಗ್ಗಟ್ಟು ಕಾಯಬೇಕು. ರಾಜ್ಯದ ಹಿತ ಕಾಯುವ ವಿಚಾರದಲ್ಲಿ ಎಲ್ಲ ಪಕ್ಷಗಳು ರಾಜಕೀಯ ಬಿಟ್ಟು ಒಗ್ಗೂಡಬೇಕು ಎಂದು ಮನವಿ ಮಾಡಿದರು.

ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಮಸೂದೆಯನ್ನು ಸಂಸತ್‌ನಲ್ಲಿ ಅಂಗೀಕರಿಸಿರುವುದು ಸ್ವಾಗತಾರ್ಹ. ಈ ದೇಶ ಮಹಿಳಾ ಪ್ರಧಾನಿಯನ್ನು ಬಹಳ ಹಿಂದೆಯೇ ಕಂಡಿದ್ದು, ಅಮೆರಿಕದಲ್ಲಿ ಇದುವರೆಗೆ ಒಬ್ಬರು ಮಹಿಳಾ ಅಧ್ಯಕ್ಷರು ಆಯ್ಕೆಗೊಂಡಿಲ್ಲ. ಈಗಾಗಲೇ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲಾಗಿದೆ. ಇನ್ನು ಮುಂದೆ ಲೋಕಸಭೆ ಹಾಗೂ ವಿಧಾನಸಭೆಯಲ್ಲೂ ಮೀಸಲಾತಿ ದೊರೆಯಲಿದೆ. ಮಹಿಳೆಯರನ್ನು ಬಿಟ್ಟು ಪುರುಷರೇ ಸಮಾಜವನ್ನು ಮುನ್ನಡೆಸಲು ಸಾಧ್ಯವಿಲ್ಲ. ಹಾಗಾಗಿ ಮಹಿಳೆಯರಿಗೆ ಮೀಸಲಾತಿ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net