ಯುವಕರಲ್ಲಿ ಹೆಚ್ಚುತ್ತಿರುವ ಹೃದಯಾಘಾತಕ್ಕೆ ಕಾರಣ? ಪರಿಹಾರ? ವಿಜಯವಾಣಿ ಕ್ಲಬ್​ಹೌಸ್​ನಲ್ಲಿಂದು ಹೃದಯದ ಕಾಳಜಿ

Club house
Published on

ಬೆಂಗಳೂರು: ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​ ವಯಸ್ಸಲ್ಲದ ವಯಸ್ಸಿನಲ್ಲಿ ತೀವ್ರಸ್ವರೂಪದ ಹೃದಯಾಘಾತದಿಂದ ನಮ್ಮನ್ನಗಲಿದರು. ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತ ವೆನ್ನುವುದು ಹಿರಿಯರು& ಕಿರಿಯರೆಂಬ ಭೇದವಿಲ್ಲದೆ ಗಟ್ಟಿಮುಟ್ಟಾಗಿದ್ದವರನ್ನೂ ಬಲಿತೆಗೆದುಕೊಳ್ಳುತ್ತಿದೆ. ಹೀಗೇಕಾಗುತ್ತಿದೆ? ಕಾಲದ ಗುಣವೋ? ಆಧುನಿಕ ಜೀವನಶೈಲಿ ಕಾರಣವೋ? ಪರಿಸರ, ಆಹಾರ, ಯಾವುದು ಕಾರಣ? ಈ ವಿಚಾರವನ್ನು ಚರ್ಚಿಸಲು, ತಜ್ಞರಿಂದ ಮಾಹಿತಿ ಪಡೆದುಕೊಳ್ಳಲು "ವಿಜಯವಾಣಿ' ಹಾಗೂ "ದಿಗ್ವಿಜಯ 24್ಡ7 ನ್ಯೂಸ್​' ಭಾನುವಾರ ಸಂಜೆ 6ರಿಂದ ಕ್ಲಬ್​ಹೌಸ್​ ಮೊಬೈಲ್​ ಆ್ಯಪ್​ ಮೂಲಕ ಸಂವಾದ ಆಯೋಜಿಸಿದೆ.

ಹೃದಯ ತಜ್ಞ, ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ಎನ್​. ಮಂಜುನಾಥ್​ ಸಂವಾದದಲ್ಲಿ ಪಾಲ್ಗೊಂಡು ಸಮಗ್ರ ಮಾಹಿತಿ ನೀಡಲಿದ್ದಾರೆ. ಸಾರ್ವಜನಿಕರು ಸಂವಾದದಲ್ಲಿ ಭಾಗವಹಿಸಿ ಪ್ರಶ್ನೆಗಳನ್ನು ಕೇಳಬಹುದು. ಇಂದು ಸಂಜೆ 6ರಿಂದ ಆರಂಭವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net