ನಗರಸಭೆ ಮುಂಭಾಗ ಶವವಿಟ್ಟು ಪ್ರತಿಭಟನೆ

IMG-20221121-WA0014.jpg
Published on

ಕೊಪ್ಪಳ: ಬಿಡಾದಿ ದನ ದಾಳಿ ಮಾಡಿದ ಹಿನ್ನೆಲೆ ಮಹಿಳೆ ಮೃತಪಟ್ಟಿದ್ದು, ವಾಡ್೯ ನ ನಾಗರಿಕರು ಸೋಮವಾರ ಮಧ್ಯಾಹ್ನ ನಗರಸಭೆ ಮುಂಭಾಗ ಶವ ಇಟ್ಟು ಪ್ರತಿಭಟನೆ ನಡೆಸಿದರು.

ಭಾನುವಾರ ಸಂಜೆ ನಗರದ 30 ನೇ ವಾಡ್೯‌ನ ದೇವರಾಜ್ ಅರಸು ಕಾಲನಿಯಲ್ಲಿ ನಿವಾಸಿ ರಮೀಜಾ ಬೇಗಂ (44) ಬರ್ಹಿದೆಸೆಗೆ ತೆರಳಿದ್ದು, ಬಿಡಾಡಿ ದನಗಳ ಗುಂಪು ದಾಳಿ ಮಾಡಿದೆ. ಹೊಟ್ಟೆ ಭಾಗಕ್ಕೆ ದನ ಗುದ್ದಿದ್ದು, ಸ್ಥಳದಲೇ ಮಹಿಳೆ ಮೃತಪಟ್ಟಿದ್ದಾಳೆ.
ಘಟನೆ ಹಿನ್ನೆಲೆ ವಾಡ್೯ ನ ನಾಗರಿಕರು ನಗರಸಭೆ ಮುಂಭಾಗ ಶವವಿಟ್ಟು, ಬಿಡಾಡಿ ದನಗಳನ್ನು ಗೋಶಾಲೆಗೆ ಬಿಡಬೇಕು. ಅವಘಡದ ಹೊಣೆ ನಗರಸಭೆ ಹೊರಬೇಕು. ಮೃತ ಮಹಿಳೆಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net