ಜಾನುವಾರು ಸಾಗಾಟ ಪತ್ತೆ, ಓರ್ವ ಸೆರೆ

Arrest
Published on


ಬಂಟ್ವಾಳ: ರಿಕ್ಷಾ ಟೆಂಪೋದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಮಾಹಿತಿ ಪಡೆದ ಗ್ರಾಮಾಂತರ ಪೊಲೀಸರು ದಾಳಿ ನಡೆಸಿದ್ದು. ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಬಂಧಿಸಿದ್ದಾರೆ. ಇನ್ನೋರ್ವ ಪರಾರಿಯಾಗಿದ್ದಾನೆ.

ಅಬ್ದುಲ್ ಹಮೀದ್(37)ಬಂಧಿತ ಆರೋಪಿ. ಅಬ್ಬಾಸ್ ಪರಾರಿಯಾಗಿದ್ದಾನೆ. ಭಾನುವಾರ ಬೆಳಗಿನ ಜಾವ 5ರ ವೇಳೆಗೆ ಮೋಂತಿಮಾರಿನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಮಂಚಿಕಟ್ಟೆಯಿಂದ ಬಂದ ವಾಹನವನ್ನು ಪೊಲೀಸರು ತಡೆದು ನಿಲ್ಲಿಸಿದ್ದಾರೆ. \

ಈ ಸಂದರ್ಭ ಚಾಲಕನ ಬದಿಯ ಸೀಟಿನಲ್ಲಿ ಕುಳಿತ ಆರೋಪಿ ಟೆಂಪೋದಿಂದ ಹಾರಿ ಪರಾರಿಯಾಗಿದ್ದಾನೆ. ಪೊಲೀಸರು ಚಾಲಕನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಟೆಂಪೋದಲ್ಲಿ ದನ ಸಾಗಿಸುತ್ತಿದ್ದುದು ಪತ್ತೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net