

ಹಗರಿಬೊಮ್ಮನಹಳ್ಳಿ(ವಿಜಯನಗರ): ತಾಲೂಕಿನ ಅಲಬೂರು ಗ್ರಾಮದ ಬಳಿ ಮೈದುಂಬಿ ಹರಿಯುತ್ತಿರುವ ಹಗರಿ ಹಳ್ಳದಲ್ಲಿ ಆಕಳು ಕೊಚ್ಚಿ ಹೋಗಿರುವ ಘಟನೆ ನಡೆದಿದೆ.
ಅಲಬೂರು ಗ್ರಾಮದ ನಿವಾಸಿ ಬಾರಿಕರ ಫಕೀರಪ್ಪ ಎಂಬುವರು ಹಳ್ಳದ ಸಮೀಪ ಆಕಳ ಮೈತೊಳೆಯುತ್ತಿರುವ ವೇಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಆಕಳನ್ನು ಕಾಪಾಡಲು ಹೋಗಿ ಫಕೀರಪ್ಪನು ನೀರಿನಲ್ಲಿ ಮುಳುಗಿದ್ದಾಗ ಸ್ಥಳೀಯರು ಆತನನ್ನು ರಕ್ಷಿಸಿದ್ದಾರೆ. ಆದರೆ, ಆಕಳು ರಕ್ಷಣೆ ಮಾಡಲಾಗದೆ ನೀರಿನಲ್ಲಿ ಕೊಚ್ಚಿ ಹೋಗಿದೆ
ಕಳೆದ ಎರಡು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಗರಿ ಹಳ್ಳ ಮೈದುಂಬಿ ಹರಿಯುತ್ತಿದ್ದು, ಅಪಾರ ಪ್ರಮಾಣದಲ್ಲಿ ನೀರು ಮಾಲವಿ ಜಲಾಶಯಕ್ಕೆ ಸೇರುತ್ತಿದೆ.