

ಮೈಸೂರು: ತಿ.ನರಸೀಪುರ ತಾಲೂಕಿನ ಬನ್ನೂರಿನ ಫುಟ್ಬಾಲ್ ಮೈದಾನದಲ್ಲಿ ಫೆ.9 ರಿಂದ 15ರವರೆಗೆ ಶ್ರೀ ಹೇಮಾದ್ರಂಭ ದನಗಳ ಜಾತ್ರಾ ಮಹೋ ತ್ಸವ ಆಯೋಜಿಸಲಾಗಿದೆ ಎಂದು ಜಾತ್ರಾ ಸಮಿತಿ ಅಧ್ಯಕ್ಷ ಡಾ. ರಾಹುಲ್‌ಗೌಡ ತಿಳಿಸಿದರು.
ಹಳ್ಳಿಕಾರ್ ತಳಿಯ ರಾಸುಗಳು ಈ ಬಾರಿಯ ಜಾತ್ರೆಯ ವಿಶೇಷವಾಗಿದೆ. ಹಸುಗಳ ವಿಭಾಗ, ಬೀಜದ ಹೋರಿಗಳ ವಿಭಾಗ, ಎತ್ತುಗಳ ವಿಭಾಗ ಮಾಡಲಾಗಿದೆ. ಪ್ರತಿ ವಿಭಾಗದಲ್ಲಿಯೂ ಉತ್ತಮವಾದ ಮೊದಲ ಮೂರಕ್ಕೆ ಬಹುಮಾನ ನೀಡಲಾಗುವುದು. ಆಯ್ಕೆಯನ್ನು ಪಶು ವೈದ್ಯಕೀಯ ಅಧಿಕಾರಿಗಳು ಮಾಡಲಿದ್ದಾರೆ. ವಿಶೇಷವಾಗಿ ಮೂರು ಚಾಂಪಿಯನ್ ಪ್ರಕಟ ಮಾಡಲಾಗುವುದು. ಉತ್ತಮವಾದ ಚಪ್ಪರಕ್ಕೆ ಬಹುಮಾನ ನೀಡಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.