ಹೊಳೆಗೆ ಬಿದ್ದು ಜಾನುವಾರು ಸಾವು

januvaaru saau
Published on

ಮಡಿಕೇರಿ: ಮೇಕೇರಿ ಗ್ರಾ.ಪಂ ಗೊಳಪಡುವ ಬಿಳಿಗೇರಿಯ ಬಕ್ಕಬಾಣೆ ಎಂಬ ಗ್ರಾಮದಲ್ಲಿ ಜಾನುವಾರು ಒಂದು ಗ್ರಾಮಸ್ಥರು ಕುಡಿಯಲು ಬಳಕೆ ಮಾಡುವ ನೀರಿನ ಹೊಳೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಜಾನುವಾರು ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಈ ಭಾಗದ ೧೦೦-೧೩೦ ಮನೆಗಳಿಗೆ ಇದೇ ನೀರು ಸರಬರಾಜು ಆಗುತ್ತಿದೆ. ಜಲಜೀವನ್ ಮಿಷನ್ ಯೋಜನೆ ಈ ಭಾಗಕ್ಕೆ ಇನ್ನೂ ಕೂಡ ದೊರೆಯದೇ ಇರುವುದು ಬೇಸರದ ಸಂಗತಿಯಾಗಿದೆ. ಈ ನೀರಿನ ಸೇವನೆಯಿಂದ ಗ್ರಾಮಸ್ಥರಿಗೆ, ಮಕ್ಕಳಿಗೆ ಅನಾಹುತ ಸಂಭವಿಸಿದ್ದಲ್ಲಿ ಜಿಲ್ಲಾಡಳಿತವೇ ನೇರ ಹೊಣೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಇಒ ಕಚೇರಿ ಮುತ್ತಿಗೆ ಎಚ್ಚರಿಕೆ: ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸಿಇಒ ಕಚೇರಿಗೆ ಜಾನುವಾರು ಶವದ ಸಮೇತ ಮುತ್ತಿಗೆ ಹಾಕಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಗ್ರಾಮಸ್ಥರ ಅನುಕೂಲಕ್ಕಾಗಿ ಶುದ್ಧ ಕುಡಿಯುವ ನೀರಿನ ಘಟಕ ಮಾಡಲಾಗಿದ್ದರೂ ಕೂಡ ನೀರು ಸರಬರಾಜದೆ ಹಾಗೆಯೇ ಉಳಿದು ಹೋಗಿದೆ. ಈ ಬಗ್ಗೆಯೂ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net