ದನದ ಕೊಟ್ಟಿಗೆಯಲ್ಲಿದ್ದ ಮೂರು ಕುರಿ ಕಳ್ಳತನ

Crime Logo
Published on

ರಾಣೆಬೆನ್ನೂರ: ದನದ ಕೊಟ್ಟಿಗೆಯಲ್ಲಿ ಕಟ್ಟಿದ್ದ ಮೂರು ಕುರಿಳನ್ನು ಯಾರೋ ಖದೀಮರು ಕಳ್ಳತನ ಮಾಡಿಕೊಂಡು ಹೋದ ಟನೆ ತಾಲೂಕಿನ ಹುಣಸಿಕಟ್ಟೆ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಗ್ರಾಮದ ಹುಚ್ಚಪ್ಪ ಸಿದ್ದಪ್ಪ ಐರಣಿ ಎಂಬುವರ ಕುರಿಗಳು ಕಳ್ಳತನವಾಗಿರುವುದು.
ಇವರು ದನದ ಕೊಟ್ಟಿಗೆಯಲ್ಲಿ ಕುರಿಗಳನ್ನು ಕಟ್ಟಿದ್ದರು. ರಾತ್ರಿ ಸಮಯದಲ್ಲಿ ಯಾರೋ ಕಳ್ಳರು ದನದ ಕೊಟ್ಟಿಗೆಯ ಬೀಗ ಮುರಿದು ಕುರಿಗಳನ್ನು ದೋಚಿದ್ದಾರೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net