ಮಳೆಗೆ ಜಾನುವಾರು ಕೊಟ್ಟಿಗೆ ಕುಸಿತ

Koppa visit
ಕೊಪ್ಪದ ಸೂರ್ಯಾಸ್ತಮಾನ ವೀಕ್ಷಣಾ ಸ್ಥಳದ ಬಳಿ ಭೂಕುಸಿತ ಉಂಟಾದ ಜಾಗಕ್ಕೆ ಲೋಕೋಪಯೋಗಿ ಇಲಾಖೆ ಶಿವಮೊಗ್ಗದ ಸಿನಿಯರ್ ಇಂಜಿನಿಯರ್ ಗಣೇಶ್ ವೀಕ್ಷಿಸಿದರು. ಚಿಂತನ್ ಬೆಳಗೊಳ, ಅನ್ನಪೂರ್ಣಾ ನರೇಶ್ ಇದ್ದರು.
Published on

ಕೊಪ್ಪ: ತಾಲೂಕಿನಾದ್ಯಂತ ಪುನರ್ವಸು ಮಳೆ ಅಬ್ಬರ ಮುಂದುವರಿದಿದ್ದು, ಹಲವು ಭಾಗದಲ್ಲಿ ಅನಾಹುತಗಳನ್ನು ಸೃಷ್ಟಿಸಿದೆ. ಹಲವೆಡೆ ಗುಡ್ಡಗಳು ಕುಸಿದಿವೆ. ವಿದ್ಯುತ್ ಕಂಬ, ಮರಗಳು ನೆಲಕ್ಕೆ ಉರುಳಿವೆ.

ಬಿಂತ್ರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಲಮಕ್ಕಿಯ ಜಾನಕಿ ಎಂಬುವವರ ದನದ ಕೊಟ್ಟಿಗೆ ನೆಲಕಚ್ಚಿದೆ. ಜಾನುವಾರುಗಳಿಗೆ ಯಾವುದೇ ಹಾನಿಯಾಗಿಲ್ಲ. ಕೊಟ್ಟಿಗೆ ಮಾತ್ರ ಸಂಪೂರ್ಣ ಜಖಂಗೊಂಡಿದೆ. ಹಿರೇಗದ್ದೆಯ ಗಾಯತ್ರಿ ಎಂಬುವವರ ಕೊಟ್ಟಿಗೆ ಛಾವಣಿ ಮೇಲೆ ಮರ ಬಿದ್ದು ಹಾನಿಯಾಗಿದೆ.
ಕೊಪ್ಪದ ಸೂರ್ಯಾಸ್ತ ವೀಕ್ಷಣಾ ಸ್ಥಳದ ಬಳಿ ಭೂಕುಸಿತ ಉಂಟಾದ ಜಾಗಕ್ಕೆ ಲೋಕೋಪಯೋಗಿ ಇಲಾಖೆಯ ಶಿವಮೊಗ್ಗದ ಸೀನಿಯರ್ ಇಂಜಿನಿಯರ್ ಗಣೇಶ್, ಇಇ ಶ್ರೀಧರ್, ಇಇಇ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಕೆಡಿಪಿ ಸದಸ್ಯರಾದ ಚಿಂತನ್ ಬೆಳಗೊಳ ಮಾತನಾಡಿ, ರಸ್ತೆಯುದ್ದಕ್ಕೂ ಕುಸಿತವಾಗುವ ಸಾಧ್ಯತೆಯಿದೆ. ರಸ್ತೆ ದುರಸ್ತಿ ಹೇಗೆ ಎಂಬುದರ ಬಗ್ಗೆ ಯೋಚಿಸಿ ಕ್ರಮ ತೆಗೆದುಕೊಳ್ಳಬೇಕು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಇಂಜಿನಿಯರ್ ಗಣೇಶ್, ಭೂ ಕುಸಿತವಾಗದಂತೆ ತಡೆಗೋಡೆ ನಿರ್ಮಾಣ ಹಾಗೂ ಬಂಡೆ ಕಲ್ಲುಗಳನ್ನು ಕೊರೆದು ರಸ್ತೆ ನಿರ್ಮಾಣ ಮಾಡಬೇಕಿದೆ. ಈ ಸಂಬಂಧ ಚರ್ಚಿಸಿ ಶಾಸಕರಿಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net