

ಮಂಗಳೂರು: ಮನೆಯವರ ಮುಂದೆ ತಲವಾರು ಝಳಪಿಸುತ್ತಾ ದನಗಳನ್ನು ಸೆಳೆದೊಯ್ದ ಗೋಕಳ್ಳರನ್ನು ಒಂದೇ ದಿನದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲ ಮಾಸ್ತಿಕಟ್ಟೆಯ ನಿವಾಸಿಗಳಾದ ಮೊಹಮ್ಮದ್ ಸಲೀಂ(೩೨), ಮೊಹಮ್ಮದ್ ತಂಜಿಲ್(೨೫), ಮೊಹಮ್ಮದ್ ಇಕ್ಬಾಲ್(೨೩) ಬಂಧಿತರು. ಇವರಿಂದ ಕೃತ್ಯದಲ್ಲಿ ಬಳಸಿರುವ ಸ್ಕಾರ್ಪಿಯೊ ವಾಹನ ವಶಕ್ಕೆ ಪಡೆಯಲಾಗಿದೆ. ಕೂಳೂರಿನ ಗೋಲ್ಡ್‌ಪಿಂಚ್ ಸಿಟಿ ಮೈದಾನದ ಬಳಿಯ ಮನೆಯ ಆವರಣದಲ್ಲಿ ಕಟ್ಟಿಹಾಕಿದ್ದ ಮೂರು ದನಗಳನ್ನು ಈ ಮೂವರು ಶುಕ್ರವಾರ ಮುಂಜಾನೆ ಸ್ಕಾರ್ಪಿಯೊಗೆ ತುಂಬಿದ್ದರು. ಪರಿಸರದವರು ಸೇರಿ ಬೊಬ್ಬೆ ಹಾಕಿದಾಗ ತಲವಾರು ತೋರಿಸಿ ಪರಾರಿಯಾಗಿದ್ದರು.