ಜಾನುವಾರು ಗಣತಿಗೆ ಸಹಕರಿಸಿ

cattel survey in koppal dc naleen athul poster
Published on

ಕೊಪ್ಪಳ: ಜಿಲ್ಲಾದ್ಯಂತ ಜಾನುವಾರು ಗಣತಿ ಆರಂಭವಾಗಿದೆ. ಗಣತಿದಾರರು ಸಮೀೆ ಬಂದಾಗ ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾಧಿಕಾರಿ ನಲಿನ್​ ಅತುಲ್​ ತಿಳಿಸಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಪಶುಸಂಜೀವಿನಿ ಯೋಜನೆ ಹಾಗೂ ತಳಿ ಆಧಾರಿತ ಯೋಜನೆಗಳ ಭಿತ್ತಿಪತ್ರ ಬಿಡುಡಗೆ ಮಾಡಿ ಮಾತನಾಡಿದರು.

ಗಣತಿದಾರರು ಮನೆ- ಮನೆ ಭೇಟಿ ನೀಡಿ ಜಾನುವಾರುಗಳ ಮಾಹಿತಿ ಸಂಗ್ರಹಿಸುವರು. ಮನೆಗೆ ಬಂದಾಗ ಸರಿಯಾದ ಮಾಹಿತಿ ಒದಗಿಸಿ. ಪಶುಸಂಜೀವಿನಿ ಯೋಜನೆಯಡಿ ಜಿಲ್ಲೆಯಲ್ಲಿ 8 ಸಂಚಾರಿ ಪಶು ಚಿಕಿತ್ಸಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಜಾನುವಾರು ತುರ್ತು ಚಿಕಿತ್ಸೆಗೆ ಟೋಲ್​-ಫ್ರೀ ಸಂಕ್ಯೆ-1962 ಕರೆ ಮಾಡಿ ನೆರವು ಪಡೆಯಬಹುದು. ಲಿಂಗ ನಿರ್ಧರಿತ ತಳಿ ಅಭಿವೃದ್ಧಿ ಯೋಜನೆಯಡಿ ಕೃತಕ ಗರ್ಭಧಾರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೈನುಗಾರಿಕೆ ಕೈಗೊಂಡ ರೈತರು ಲಾಭ ಪಡೆಯುವಂತೆ ಮಾಹಿತಿ ನೀಡಿದರು.

ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ.ಪಿ.ಎಂ.ಮಲ್ಲಯ್ಯ, ಡಿಎಚ್​ಒ ಡಾ.ಟಿ.ಲಿಂಗರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net