ಸ್ವಚ್ಛತೆಗೆ ಪ್ರಥಮ ಆದ್ಯತೆ

tyajya
Published on

ಉಪ್ಪಿನಂಗಡಿ: ಪ್ರತಿ ಗ್ರಾಮದಲ್ಲೂ ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸರ್ಕಾರ ದೃಢ ಸಂಕಲ್ಪ ತೊಟ್ಟಿದೆ ಎಂದು ಸುಳ್ಯ ಶಾಸಕ ಎಸ್.ಅಂಗಾರ ಹೇಳಿದರು.

ಕೌಕ್ರಾಡಿ ಗ್ರಾಮ ಪಂಚಾಯಿತಿ ಅಧೀನದಲ್ಲಿ ಘನ ತ್ಯಾಜ್ಯ ಘಟಕದ ಏಕರೂಪದ ಬ್ರಾೃಂಡಿಂಗ್ ಮಂಗಳವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಪ್ರತಿ ಮನೆ, ಉದ್ಯಮಗಳು ತ್ಯಾಜ್ಯ ವಿಲೇವಾರಿಗೆ ಸಹಕರಿಸಬೇಕು. ಪಂಚಾಯಿತಿ ನಿಯಮಗಳ ಪಾಲನೆ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು,. ಜಿಪಂ ಸದಸ್ಯ ಸರ್ವೋತ್ತಮ ಗೌಡ, ಗ್ರಾಮಸ್ಥರಿಗೆ ಒಣ ಹಾಗೂ ಹಸಿ ಕಸ ವಿಂಗಡಣೆಗೆ ಪ್ರತ್ಯೇಕ ಬಕೆಟ್ ನೀಡಿದರು. ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿದರು.

ಕಡಬ ತಾಪಂ ಅಧ್ಯಕ್ಷೆ ರಾಜೇಶ್ವರಿ, ಉಪಾಧ್ಯಕ್ಷೆ ಜಯಂತಿ ಗೌಡ, ಸ್ಥಾಯೀ ಸಮಿತಿ ಅಧ್ಯಕ್ಷೆ ಸುಮಾ, ತಾಪಂ ಸದಸ್ಯರಾದ ಕೆ.ಟಿ.ವಲ್ಸಮ್ಮ, ಎಪಿಎಂಸಿ ಸದಸ್ಯ ಬಾಲಕೃಷ್ಣ ಬಾಣೆಜಾಲು, ತಾಪಂ ಮಾಜಿ ಸದಸ್ಯ ಭಾಸ್ಕರ್ ಗೌಡ, ಗ್ರಾಪಂ ನಿಕಟಪೂರ್ವ ಅಧ್ಯಕ್ಷ ಇಬ್ರಾಹಿಂ ಎಂ.ಕೆ., ಮಾಜಿ ಸದಸ್ಯರಾದ ಲೋಕೇಶ್ ಬಾಣೆಜಾಲು, ಜಾನಕಿ, ವಿಮಲಾ, ಹನೀಫ್, ಪಂಚಾಯಿತಿ ಆಡಳಿತಾಧಿಕಾರಿ ಭರತ್ ಬಿ.ಎಂ. ಮತ್ತಿತರರು ಉಪಸ್ಥಿತರಿದ್ದರು. ಪಿಡಿಒ ಮಹೇಶ ಜಿ.ಎನ್. ಸ್ವಾಗತಿಸಿದರು. ಕಾರ‌್ಯದರ್ಶಿ ಸತೀಶ್ ಬಂಗೇರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net