ಕಥೋಲಿಕ್ ಶಿಕ್ಷಣ ಮಂಡಳಿಯಿಂದ ವಿದ್ಯಾರ್ಥಿವೇತನ ವಿತರಣೆ

mng-16sep-catholic
Published on


ಮಂಗಳೂರು : ಕಥೋಲಿಕ್ ಶಿಕ್ಷಣ ಮಂಡಳಿ ವತಿಯಿಂದ ಲೆಸ್ಲಿ ಎಫ್. ಶೆಣೈ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮವು ಬಜ್ಜೋಡಿಯ ಶಾಂತಿಕಿರಣ್ ಪಾಲನಾ ಕೇಂದ್ರದಲ್ಲಿ ನಡೆಯಿತು. ಪ್ರಥಮ ಪಿಯು ಶಿಕ್ಷಣ ಪಡೆಯುತ್ತಿರುವ 76 ಅರ್ಹ ಕಥೋಲಿಕ್ ವಿದ್ಯಾರ್ಥಿಗಳಿಗೆ
ವಿದ್ಯಾರ್ಥಿ ವೇತನದ ಚೆಕ್‌ಗಳನ್ನು ಹಸ್ತಾಂತರಿಸಲಾಯಿತು.
ಮುಖ್ಯ ಅತಿಥಿಯಾಗಿದ್ದ ಮೂಲ್ಕಿ ಚರ್ಚ್‌ನ ಧರ್ಮ ಗುರು ಫಾ. ಆಂಟೋನಿ ಶ್ಹೇರಾ ಮಾತನಾಡಿ ‘ ಲೆಸ್ಲಿ ಶೆಣೈ ಅವರು ಉದಾರ ಮನಸುಳ್ಳವರು. ಸಮುದಾಯದ ಸುಧಾರಣೆಗಾಗಿ ತಮ್ಮ ಸಂಪನ್ಮೂಲಗಳನ್ನು ಹಂಚಿಕೊಳ್ಳುತ್ತಾರೆ. ಎಲ್ಲ ವರ್ಗದ ಜನರಿಗೆ ಅವರು ಸ್ಪಂದಿಸುತ್ತಾರೆ ಎಂದರು.
ವಿದ್ಯಾರ್ಥಿ ವೇತನದ ಪ್ರಾಯೋಜಕರಾದ ಲೆಸ್ಲಿ ಶೆಣೈ ಮಾತನಾಡಿ ‘ ನನ್ನ ಮಿಲಿಟರಿ ಸೇವೆಯ ಉಳಿತಾಯದಿಂದ ಈ ವಿದ್ಯಾರ್ಥಿ ವೇತನ ನೀಡುತ್ತಿದ್ದೇನೆ. ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡಲು ಇದು ಪ್ರೇರಣೆಯಾಗಲಿ ಎಂದರು.
ಕಥೋಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ಡಾ. ಪ್ರವೀಣ್ ಲಿಯೋ ಲಸ್ರಾದೊ, ಆಡಳಿತ ಮಂಡಳಿಯ ಸದಸ್ಯ ಡಾ. ಡೆನಿಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಪಾದುವ ಕಾಲೇಜಿನ ಉಪ ಪ್ರಾಂಶುಪಾಲ ರೋಶನ್ ಸಂತುಮಾಯರ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net