ಕ್ಯಾಟರಿಂಗ್ ವ್ಯವಹಾರ ನೆಪದಲ್ಲಿ 1.16 ಲಕ್ಷ ರೂ. ವಂಚನೆ

Fruad
Published on

ಮಂಗಳೂರು: ಕ್ಯಾಟರಿಂಗ್ ವ್ಯವಹಾರಕ್ಕೆ ಬೇಕಾಗುವ ವಸ್ತುಗಳನ್ನು ನೀಡುವುದಾಗಿ ಹೇಳಿ 1.16 ಲ.ರೂ. ವಂಚಿಸಿರುವ ಘಟನೆ ನಡೆದಿದೆ.


ದೂರುದಾರರು ಜು.15ರಂದು ಬಿಗ್‌ಬಾಸ್ಕೆಟ್ ಆ್ಯಪ್‌ನಲ್ಲಿ ಕ್ಯಾಟರಿಂಗ್ ವ್ಯವಹಾರಕ್ಕೆ ಬೇಕಾದ ವಸ್ತುಗಳನ್ನು ನೋಡಿ ಬಿಗ್‌ಬಾಸ್ಕೆಟ್ ಫೇಸ್‌ಬುಕ್ ಖಾತೆದಾರರೊಂದಿಗೆ ಚಾಟಿಂಗ್ ಮಾಡಿದ್ದರು. ಆಗ ಕಡಿಮೆ ಬೆಲೆಗೆ ವಸ್ತುಗಳನ್ನು ಕೊಡುವುದಾಗಿ ಚಾಟಿಂಗ್ ನಡೆಸಿದ ಅಪರಿಚಿತ ಭರವಸೆ ನೀಡಿದ್ದ. ಅನಂತರ ಬಿಗ್‌ಬಾಸ್ಕೆಟ್ ಎಂಬ ಫೇಸ್‌ಬುಕ್ ಲಿಂಕ್ ಕಳುಹಿಸಿ ಅದರಲ್ಲಿ ಮಾಹಿತಿಯನ್ನು ನೀಡುವಂತೆ ತಿಳಿಸಿದ. ದೂರುದಾರರು ಅವರ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ವಿವರಗಳನ್ನು ನೀಡಿದ್ದರು. ಬಳಿಕ ಅವರ ಕ್ರೆಡಿಟ್ ಕಾರ್ಡ್ ಖಾತೆಯಿಂದ ಹಂತ ಹಂತವಾಗಿ ಮೋಸದಿಂದ ಒಟ್ಟು 1.16 ಲ.ರೂ. ವರ್ಗಾಯಿಸಿ ವಂಚಿಸಲಾಗಿದೆ. ನಗರದ ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net