

ಎಚ್.ಡಿ.ಕೋಟೆ: ತಾಲೂಕಿನಲ್ಲಿ ರೋಟರಿ ಕ್ಲಬ್ 1 ಸಾವಿರ ಜನರಿಗೆ ಕಣ್ಣಿನ ಪೊರೆ ತೆಗೆಯುವ ಶಸ್ತ್ರಚಿಕಿತ್ಸೆ ಮಾಡಿಸಿರುವುದು, ದಾಖಲೆಯಾಗಿ ಉಳಿಯುತ್ತದೆ ಎಂದು ರೋಟರಿ ಜಿಲ್ಲಾ ಪ್ರಾಂತಪಾಲ ಪಿ.ಕೆ.ರಾಮಕೃಷ್ಣನ್ ತಿಳಿಸಿದರು.
ಪಟ್ಟಣದ ಸಮೀಪವಿರುವ ಹೆಗ್ಗಡಾಪುರ ಗ್ರಾಮದಲ್ಲಿರುವ ಕಬಿನಿ ಫಾರಂನಲ್ಲಿ ಬುಧವಾರ ಆಯೋಜಿಸಿದ್ದ ರೋಟರಿ ಕ್ಲಬ್‌ನ ನೂತನ ತಂಡಕ್ಕೆ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ರೋಟರಿ ಸಂಸ್ಥೆಯು ಈ ರೀತಿಯ ಸೇವೆ ಸಲ್ಲಿಸುತ್ತಿರುವುದು ಜಿಲ್ಲೆಯಲ್ಲಿ ಇದೇ ಮೊದಲು. ಈ ಸೇವೆ ಮುಂದಿನ ದಿನಗಳಲ್ಲಿ ಇದೇ ರೀತಿ ಮುಂದುವರಿಯಲಿ ಎಂದರು.
ಅಧ್ಯಕ್ಷರಾಗಿ ಆಯ್ಕೆಯಾದ ಎಸ್.ಎನ್.ನಿರಂಜನ್ ಮಾತನಾಡಿ, ಕಳೆದ ಸಾಲಿನಲ್ಲಿ ನಮ್ಮ ಕ್ಲಬ್ ಹಲವಾರು ಜನಪರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಕಳೆದ ಸಾಲಿನಲ್ಲಿ 1000 ಜನರಿಗೆ ತಾಲೂಕಿನಲ್ಲಿ ಕಣ್ಣಿನ ಪೊರೆ ತೆಗೆಯುವ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ವಡ್ಡರಗುಡಿ ಗ್ರಾಮದ ಅಂಗನವಾಡಿಯನ್ನು ದತ್ತು ಪಡೆದು ಅಭಿವೃದ್ಧಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿಯೂ ಕ್ಲಬ್ ಸೇವೆಗಳು ಇದೇ ರೀತಿ ಮುಂದುವರಿಸಿಕೊಂಡು ಹೋಗಲಾಗುವುದು ಎಂದು ಭರವಸೆ ನೀಡಿದರು.
ಉಪಾಧ್ಯಕ್ಷರಾಗಿ ಶ್ರೀಕಾಂತ್, ಕಾರ್ಯದರ್ಶಿಯಾಗಿ ಬಿ.ಎನ್.ಶಿವಣ್ಣ, ಖಜಾಂಚಿಯಾಗಿ ನಾರಾಯಣ್, ಕ್ಲಬ್ ನಿರ್ದೇಶಕರಾಗಿ ಸ್ವಾಮಿ, ವೃತ್ತಿಪರ ನಿರ್ದೇಶಕರಾಗಿ ಆರ್ಮುಗಂ, ಸಮುದಾಯದ ನಿರ್ದೇಶಕರಾಗಿ ಗಣೇಶ್ ಲಾಡ್, ಅಂತಾರಾಷ್ಟ್ರೀಯ ನಿರ್ದೇಶಕರಾಗಿ ಕೆ.ಎಂ. ಮಹೇಶ್, ಯುವ ಜನ ನಿರ್ದೇಶಕರಾಗಿ ದೀಪು ನೇಮಕಗೊಂಡರು.
ವೈದ್ಯರಾದ ಜಯಂತ್, ಮಹೇಶ್, ಮುರುಗೇಶ್, ಶಿವಕುಮಾರ್, ಪತ್ರಕರ್ತ ನಾಗರಾಮ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷ ಗಂಗಾಧರ್, ಸ್ವಾಮಿ, ಶಿವಣ್ಣ ಮಾದಾಪುರ, ಗಣೇಶ್ ಲಾಡ್, ಎ.ಜೆ.ರಾಜೀವ್, ಚಿನ್ನಬೆಳ್ಳಿ ರವಿ, ಡಾ.ಮುರುಗೇಶ್, ಕೆರೂರು ಶಿವಕುಮಾರ್, ಶ್ರೀಕಂಠಯ್ಯ, ಬಸವರಾಜು, ದೀಪಕ್‌ಅರಸ್, ಸತೀಶ್ ಸುರಭಿ, ರಾಕೇಶ್ ದಾಸ್, ಡಾ.ಜಯಂತ್, ಡಾ.ಶಿವಕುಮಾರ್, ಟಿ.ಜಿ.ಬಸವರಾಜು, ಕಸ್ತೂರಿ ಮಹೇಶ್, ಧರ್ಮೇಶ್, ಚಂದ್ರು, ಕೇಶವ್, ಪ್ರಶಾಂತ್, ನಾಗರಾಜು, ಪ್ರಸಾದ್, ಎಚ್.ಎಂ.ಹರೀಶ್, ನಟರಾಜು, ಎಸ್.ಎಸ್.ಪಾರ್ಶ್ವನಾಥ್ ಜೈನ್, ಸಿದ್ದನಾಯಕ, ಬಿ.ಸಿ.ಭಾಗ್ಯೇಶ್ ಇದ್ದರು.